ತುಮಕೂರು: ಭಾರತದ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ಹಣ ಪೀಕುವುದು, ಸರ್ಕಾರದ ಉನ್ನತ ಗೌಪ್ಯ ಮಾಹಿತಿಗಳನ್ನು ದೋಚುವ ಖದೀಮರ ಸಂಖ್ಯೆ ಅಧಿಕವಾಗುತ್ತಲೆ ಇದೆ. ಇದೀಗ ನಗರದಲ್ಲಿ ಮತ್ತೊಂದು ಹನಿ ಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷನಿಗೆ ಫೇಸ್ಬುಕ್ ಮೂಲಕ ಬಲೆಗೆ ಬೀಳಿಸಿಕೊಂಡು ಹನಿಟ್ರ್ಯಾಪ್ ಮಾಡಿ 20 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪಸ್ಬಾಮಿಗೆ ಹಣ ಕೊಡದಿದ್ದರೇ ರೇಪ್ ಕೇಸ್ ಹಾಕಿ, ಸೋಷಿಯಲ್ ಮಿಡಿಯಾದಲ್ಲಿ ಬೆತ್ತಲೆ ವಿಡಿಯೋ ಹರಿಬಿಡೋದಾಗಿ ಬೆದರಿಕೆ ಹಾಕಿರುವ ನಿಶಾ ಹಾಗೂ ಆಕೆಯ ಗ್ಯಾಂಗ್ ಅನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಫೇಸ್ಬುಕ್ ಮೂಲಕ ಅಣ್ಣಪ್ಪ ಸ್ವಾಮಿಗೆ ಪ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿದ್ದ ನಿಶಾ, ಅರಂಭದಲ್ಲಿ ಪ್ರತಿದಿನ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸುತ್ತಿದ್ದಳು. ಆಗಾಗ, ಊಟ ಆಯ್ತಾ ಎಂದು ಕೇಳುವ ಜೊತೆಗೆ ಗುಡ್ನೈಟ್ ಎಂದು ಮೆಸೇಜ್ ಮಾಡುತ್ತಿದ್ದಳು.
Black water: ಬ್ಲ್ಯಾಕ್ ವಾಟರ್ ಎಂದರೇನು..? ಸೆಲೆಬ್ರಿಟಿಗಳು ಯಾಕೆ ಇದನ್ನು ಜಾಸ್ತಿ ಕುಡಿಯುತ್ತಾರೆ ಗೊತ್ತಾ.?
ಇದಾದ ನಂತರ ತನ್ನ ಬಳಿ ಒಂದಷ್ಟು ಹಣವಿದೆ ರಿಯಲ್ ಎಸ್ಟೇಟ್ ಮಾಡೋಣಾ ಅಂತ ಬುಟ್ಟಿಗೆ ಹಾಕಿಕೊಂಡ ಕಿಲಾಡಿ ಲೇಡಿ ನಿಶಾ, ಬಳಿಕ ಅಣ್ಣಪ್ಪಸ್ವಾಮಿ ಜೊತೆ ಸಲುಗೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿದ್ದಾಳೆ. ಇದಾದ ನಂತರ ನನ್ನ ಗಂಡ ಸರಿಯಿಲ್ಲ ನೀನೆ ನನ್ನನ್ನ ಮದುವೆಯಾಗು ಅಂತ ಹಿಂದೆ ಬಿದ್ದಿದ್ದಾಳೆ. ಅಣ್ಣಪ್ಪಸ್ವಾಮಿ ಜೊತೆ ಹಲವು ಕಡೆಗಳಲ್ಲಿ ಕಾರಿನಲ್ಲಿ ಸುತ್ತಾಡಿದ್ದು,
ಒಂದು ದಿನ ಪ್ಲಾನ್ ಮಾಡಿ ದೊಡ್ಡಬಳ್ಳಾಪುರ ಬಳಿಯ ಲಾಡ್ಜ್ ವೊಂದಕ್ಕೆ ಕರೆದೊಯ್ದು, ಅಣ್ಣಪ್ಪಸ್ವಾಮಿಯನ್ನ ಬೆತ್ತಲೆ ಮಾಡಿ ಮೊಬೈಲ್ ನಲ್ಲಿ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದಾಳೆ. ಇದಕ್ಕಾಗಿ ಒಂದು ಗ್ಯಾಂಗ್ ಮಾಡಿಕೊಂಡು 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಳೆ.
ಅಣ್ಣಪ್ಪಸ್ವಾಮಿಗೆ ಕರೆ ಮಾಡಿ ನೀನು ರಾಜಕೀಯದಲ್ಲಿ ಸ್ವಲ್ಪ ಹೆಸರು ಮಾಡಿದ್ದೀಯ. ನೀನು ನನಗೆ 20 ಲಕ್ಷ ರೂ. ಹಣ ಕೊಡದಿದ್ದರೆ ನಿಮ್ಮ ಮೇಲೆ ರೇಪ್ ಕೇಸ್ ಹಾಕಿ, ಬೆತ್ತಲೆ ವಿಡಿಯೋವನ್ನ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದ ಅಣ್ಣಪ್ಪಸ್ವಾಮಿ ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಹನಿಟ್ರ್ಯಾಪ್ ಮಾಡಿದ್ದ,
ತುಮಕೂರಿನ ಕ್ಯಾತಸಂದ್ರ ಮೂಲದ ನಿಶಾ ಹಾಗೂ ಆಕೆಯ ಸ್ನೇಹಿತೆ ಜ್ಯೋತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಇದರಲ್ಲಿ ಭಾಗಿಯಾಗಿದ್ದ ಗುಬ್ಬಿ ಮೂಲದ ಬಸವರಾಜು ಹಾಗೂ ಭರತ್ಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುಬರೆದಿದೆ. ಈ ಹಿಂದೆ ಗುಬ್ಬಿ ಪಟ್ಟಣದಲ್ಲಿ ಕೊಲೆಯಾಗಿದ್ದ ಕುರಿಮೂರ್ತಿ ಕೇಸಿನಲ್ಲಿಯೂ ಬಸವರಾಜು ಹಾಗೂ ಭರತ್ ಆರೋಪಿಗಳಾಗಿದ್ದಾರೆ.
ಈ ಹಿಂದೆ ಬಿಜೆಪಿಯಿಂದ ಪಟ್ಟಣ ಪಂಚಾಯತಿ ಅಧ್ಯಕ್ಷನಾಗಿದ್ದ ಅಣ್ಣಪ್ಪಸ್ವಾಮಿ, ಗುಬ್ಬಿ ತಾಲೂಕಿನಲ್ಲಿ ನಡೆದ ಸಾವಿರಾರು ಎಕರೆ ಸರ್ಕಾರಿ ಜಮೀನು ಗೋಲ್ಮಾಲ್ ಕೇಸಿನಲ್ಲಿ ಎ2 ಆರೋಪಿಯಾಗಿದ್ದಾರೆ. ಅಧ್ಯಕ್ಷನಾಗಿದ್ದ ವೇಳೆ 3 ತಿಂಗಳು ತಲೆಮರಿಸಿಕೊಂಡಿದ್ದನು. ಇದೀಗ ಪ್ರಕರಣ ಸಂಬಂಧ ಗುಬ್ಬಿ ಪೊಲೀಸರಿಂದ ತನಿಖೆ ಮುಂದುವರೆದಿದೆ.