ಮಂಡ್ಯ:- ಮಾಜಿ ಸಿಎಂ ಕುಮಾರಣ್ಣನನ್ನು ಕೇಂದ್ರ ಸಚಿವರನ್ನಾಗಿ ಮಾಡುವುದು ಖಚಿತ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದೇಶ ಕಾಯಲು ಮೋದಿಜೀ, ಕಾವೇರಿ ಕಾಯಲು ಕುಮಾರಣ್ಣ ಬೇಕು. ನಾವು ಬಿಜೆಪಿ ಕಾರ್ಯಕರ್ತರು ಕುಮಾರಣ್ಣನ ಬೆನ್ನಿಗೆ ನಿಲ್ಲುತ್ತೇವೆ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಇದು. ನರೇಂದ್ರ ಮೋದಿ ಅವರ ಪುನರಾಯ್ಕೆ ನಿಶ್ಚಿತ ಎಂದು ಹೇಳಿದ್ದಾರೆ.
ನನಗೆ ಅಸಮಾಧಾನ ಇಲ್ಲ ಹೈಕಮಾಂಡ್ ತೀರ್ಮಾನಕ್ಕೆ ಬದ್ದ:- ಕೆ ಹೆಚ್ ಮುನಿಯಪ್ಪ!
ಕಾಂಗ್ರೆಸ್ ಕಾಲಿಟ್ಟ ಕೂಡಲೇ ರಾಜ್ಯಕ್ಕೆ ಬರ ಬಂದಿದೆ. ಬಿಎಸ್ ಯಡಿಯೂರಪ್ಪ, ಕುಮಾರಣ್ಣ ಸಿಎಂ ಆಗಿದ್ದಾಗ ಮಳೆ, ಬೆಳೆ ಚೆನ್ನಾಗಿತ್ತು. ಕೆಆರ್ಎಸ್ ಬರಿದಾಗುವಾಗ ಸ್ಟಾಲೀನ್ ತಗಾದೆ ತೆಗೆಯಬೇಡಿ ಎನ್ನಲಿಲ್ಲ. ಆದರೆ ಚುನಾವಣೆಗಾಗಿ ಕೈ ಕೈ ಹಿಡಿದು ನಿಂತರು. ಇವತ್ತು ಕುಡಿಯುವ ನೀರಿಗೂ ಹೆಣಗಾಡುವ ಪರಿಸ್ಥಿತಿ ಇದೆ. ಗುತ್ತಿಗೆದಾರನಿಗೆ ಮತ ನೀಡಿದರೆ ಕಾವೇರಿ ಉಳಿಯಲ್ಲ. ಕರುಣೆಯ ಕುಮಾರಣ್ಣನಿಗೆ ಮತ ನೀಡಿ ಎಂದಿದ್ದಾರೆ
ಅಸೆಂಬ್ಲಿಯಲ್ಲಿ ಜೆಡಿಎಸ್ ಎನ್ನುವ ಕಾರ್ಯಕರ್ತರು ಎಂಪಿ ಚುನಾವಣೆ ಬಂದಾಗ ಮೋದಿ ಪರ ನಿಲುತ್ತಾರೆ. ಮಂಡ್ಯದವರು ಸ್ವಾಭಿಮಾನಿಗಳು. ಮಂಡ್ಯ, ಮೈಸೂರಿಗೆ ಅವಿನಾಭಾವ ಸಂಬಂಧ ಇದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಮತ್ತೆ ಮಳೆ ಕೈ ಕೊಡುತ್ತದೆ. KRS ಬರಿದಾಗುತ್ತದೆ, ಎಚ್ಚರಿಕೆಯಿಂದ ಮತಚಲಾಯಿಸಿ ಎಂದು ಹೇಳಿದ್ದಾರೆ.
ಶಿವರಾಮೇಗೌಡ ಸಂಸದರಾಗಿದ್ದಾಗ ಮಂಡ್ಯಕ್ಕೆ ಪಾಸ್ಪೋರ್ಟ್ ಸೇವಾ ಕೇಂದ್ರ ಬರಲು ಶ್ರಮಿಸಿದ್ದೆ. ಮಂಡ್ಯಕ್ಕೂ ಒಳಿತಾಗಲೆಂದು ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕರ್ನಾಟಕವನ್ನ ಆಳುವುದು ಹಳೇ ಮೈಸೂರು. ಈ ಬಾರಿಯೂ ನಮ್ಮ ಶಕ್ತಿ ಸಾಬೀತಾಗಬೇಕು. ಕುಮಾರಣ್ಣ ಗೆದ್ದು ಬರಬೇಕು ಎಂದರು.