ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಬರಲಿದ್ದಾಳೆ ಕಲಬುರಗಿ ಸೊಸೆ..ಹೌದು ಸಂಸದ ರಾಘವೇಂದ್ರ ಪುತ್ರ ಸುಭಾಷ್ ಜೊತೆ ನಡೆಯಲಿದೆ ಶ್ರಾವಣಾ ಮದುವೆ.ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಪುತ್ರಿಯಾಗಿರುವ ಶ್ರಾವಣಾ ಕೈಹಿಡಿಯಲಿದ್ದಾರೆ ಸುಭಾಷ್.
ಮಾರ್ಚ್ 24 ರಂದು ಕಲಬುರಗಿಯ ಖಾಸಗಿ ಹೋಟಲಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಜೂನ್ 8 ರಂದು ಬೆಂಗಳೂರಲ್ಲಿ ಅದ್ದೂರಿಯಾಗಿ ನಡೆಯಲಿದೆ ವಿವಾಹ.ವಿಶೇಷ ಅಂದ್ರೆ ಶಾಸಕ ವಿಜಯೇಂದ್ರ ಪತ್ನಿ ಸಹ ಕಲಬುರಗಿಯ ಮಾನ್ಕರ್ ಕುಟುಂಬದ ಪುತ್ರಿ.ಇದೀಗ ಮೊಮ್ಮಗನಿಗೂ ಸಹ ಕಲಬುರಗಿಯ ಬೀಗಸ್ತನ ಮಾಡಿದ್ದಾರೆ ಯಡಿಯೂರಪ್ಪ.
ಈ ಆರೋಗ್ಯ ಸಮಸ್ಯೆ ಇದ್ದವರು ಅಪ್ಪಿ-ತಪ್ಪಿಯೂ ಸೋಂಪು ಕಾಳನ್ನು ತಿನ್ನಬೇಡಿ..!
ಇಂಪಾರ್ಟೆಂಟ್ ವಿಷ್ಯ ಅಂದ್ರೆ ಬೀಗರಾಗಲಿರೋ ಲಿಂಗರಾಜಪ್ಪ ಅಪ್ಪಾ ಉತ್ತರ ಕರ್ನಾಟಕದ RSS ಪ್ರಮುಖರಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಬೀಗಸ್ತನ ರಾಜಕೀಯವಾಗಿಯೂ ಮಹತ್ವ ಪಡೆದುಕೊಳ್ಳುತ್ತಾ ಅನ್ನೋ ಕುತೂಹಲ ಮೂಡಿದೆ..