ಹಾವೇರಿ:– ಹೃದಯದ ವೈದ್ಯರು ನನಗೆ ಹೆಚ್ಚಿಗೆ ಮಾತನಾಡಬೇಡ ಎಂದಿದ್ದಾರೆ ಆದರೆ ನೀವೆ ನನ್ನ ಹೃದಯ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾದ ಘಟನೆ
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ನಡೆದಿದೆ.
ಹೃದಯ ಮತ್ತು ಮಂಡಿಶಸ್ತ್ರಚಿಕಿತ್ಸೆ ನಂತರ ಪ್ರಥಮ ಭಾರೆಗೆ ಅವರು ಸ್ವಕ್ಷೇತ್ರದ ಜನರನ್ನು ಭೇಟಿಯಾಗಿ ಮಾತನಾಡುತ್ತಿದ್ದರು. ಕ್ಷೇತ್ರದ ಜನರ ನಿಮ್ಮನೆಲ್ಲಾ ನೋಡಿದ
ಮೇಲೆ ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವದನ್ನೇ ನಾನು ಮರೆತಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾದರು.
ಇಸಿಜಿ ಇಕೋ ಮಾಡಿದಾಗ ಹೃದಯದಲ್ಲಿ ಯಾವ ಸಮಸ್ಯೆ ತೋರಿಸಲಿಲ್ಲಾ. ಆದರೆ ಅಂಜಿಯೋಗ್ರಾಮ ಮಾಡಿಸಿದಾಗ ಹೃದಯದಲ್ಲಿ ಎರಡು ಸಣ್ಣ ಒಂದು ದೊಡ್ಡದಾದ
ಬ್ಲಾಕ್ ಗಳಿವೆ ಎಂದರು.
ಸ್ಟಂಟ್ ಅಳವಡಿಸುವ ಬದಲು ಹೃದಯ ಶಸ್ತ್ರಚಿಕಿತ್ಸೆಮಾಡಿದರು. ಈಗ ನಾನು ಮೊದಲಿನಗಿಂತ ಹೆಚ್ಚು ಉತ್ಸಾಹಭರಿತನಾಗಿದ್ದೇನೆ ಎಂದು
ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು. ಇದೆಲ್ಲಾ ನಡೆದಿರುವದು ಎಲ್ಲ ಶಿಗ್ಗಾಂವಿಕ್ಷೇತ್ರದ ಜನಸ್ಥೋಮದ ಆಶೀರ್ವಾದ ಪುಣ್ಯಪಲ ದೇವಿಯ ಅನುಗ್ರಹದಿಂದ ನಾನು
ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.
ಶಸ್ತ್ರಚಿಕಿತ್ಸೆ ಮಾಡಿಸಿದ ಮೇಲೆ ವಿಚಾರ ಮಾಡಿದಾಗ ನಾನು ಇದನ್ನು ತೋರಿಸದೆ ಇದ್ದಿದ್ದರೆ ಎಲ್ಲಿಯಾದರೂ ಹೋಗಿದ್ದಾಗ ಹೃದಯಾಘಾತವಾಗಿ ನಾನು ಇರುತ್ತಿದ್ದನು
ಮೇಲೆ ಹೋಗುತ್ತಿದ್ದೇನೂ ಗೊತ್ತಿಲ್ಲಾ. ದೇವರು ನಿಮ್ಮ ಸೇವೆ ಮಾಡಲು ಈ ರೀತಿ ಪುನರಜನ್ಮ ನೀಡಿದ್ದಾನೆ ಎಂದು ನಾನು ಭಾವಿಸುವದಾಗಿ ತಿಳಿಸಿದರು. ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ನಮ್ಮ ನಡುವೆ ಅವಿನಾಭಾವ ಸಂಬಂಧವಿದ್ದು ಈ ಸಂಬಂಧ ಮುಂದಿನ ಜನ್ಮಇದ್ದರೆ ನನ್ನನ್ನು ಶಿಗ್ಗಾಂವಿ ಸವಣೂರು
ತಾಲೂಕಿನಲ್ಲಿ ಮಣ್ಣಿನಲ್ಲಿ ಹುಟ್ಟುವ ರೀತಿ ಮಾಡಲಿ ಆ ಮೂಲಕ ಜನರ ಕೆಲಸ ಮಾಡುತ್ತೇನೆ ಎಂದು ಭಗವಂತನ ಬೇಡಿಕೊಳ್ಳುತ್ತೇನೆ ಎಂದರು.