ಬೆಳಗಾವಿ: ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸದನ ಸದಸ್ಯರ ಸಮಿತಿʼ ರಚಿಸುವಲ್ಲಿ ಸರ್ಕಾರ ತೋರಿರುವ ನಿರ್ಲಕ್ಷ್ಯ ಧೋರಣೆ ಕುರಿತು ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ ರವರು ಸಭಾಪತಿಗಳಿಗೆ ಪ್ರಶ್ನಿಸಿದ್ದಾರೆ. ಸದನದಲ್ಲಿ ಮಾತನಾಡಿದ ಅವರು,
ಈ ಹಿಂದೆ ವಿಧಾನ ಮಂಡಲದ ಅಧಿವೇಶನ ಸಂದರ್ಭದಲ್ಲಿ ಮಾನ್ಯ ಸದಸ್ಯರುಗಳು ಸಾರ್ವಜನಿಕ ಹಿತದೃಷ್ಟಿಯಿಂದ ಸದನದಲ್ಲಿ ಪ್ರಸ್ತಾಪಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಸಕಾಲದಲ್ಲಿ ಇಲಾಖೆಗಳಿಂದ ಯಾವುದೇ ಉತ್ತರ ದೊರೆಯದೆ ಕಾಲವ್ಯರ್ಥ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ಸದನದ ಬಗ್ಗೆ ಗೌರವ ಇಲ್ಲದಂತಾಗಿದೆ.
Custard Apple for diabetes: ಡಯಾಬಿಟೀಸ್ ಇರುವವರು ಸೀತಾಫಲ ತಿನ್ನಬಹುದೇ.? ವೈದ್ಯರು ಹೇಳೋದೇನು..?
ಹಾಗಾಗಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಚುರುಕು ಮುಟ್ಟಿಸುವ ಸಲುವಾಗಿ ʼಸದನದ ಸದಸ್ಯರ ಸಮಿತಿʼ (ಸಕಾಲದಲ್ಲಿ ಉತ್ತರ ಪಡೆಯುವುದಕ್ಕಾಗಿ) ರಚಿಸಬೇಕು ಎಂದು ಪತ್ರದ ಮೂಲಕ ವಿಧಾನ ಪರಿಷತ್ ಸನ್ಮಾನ್ಯ ಸಭಾಪತಿಗಳಿಗೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ ಅವರು ಮನವಿ ಮಾಡಿದ್ದರು. ಆದ್ರೆ ಇದರ ಬಗ್ಗೆ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳಿಗೆ ಇಲ್ಲಿಯವರೆಗೂ ಉತ್ತರ ಸಹ ಸಿಕಿಲ್ಲ ಎಂದು ಅಧಿವೇಶನದಲ್ಲಿ ಚರ್ಚೆ ನಡೆಸಿದ್ದಾರೆ.