ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಮತ್ತೆ ಕಾರ್ತಿಕ್- ಸಂಗೀತಾ (Sangeetha Sringeri) ನಡುವೆ ಸ್ನೇಹ ಚಿಗುರಿದೆ.
ಚೆನ್ನಾಗಿದ್ದ ಜೋಡಿ ಕಾರ್ತಿಕ್- ಸಂಗೀತಾ ದೂರ ದೂರ ಆಗಿದ್ದರು. ಮತ್ತೆ ಒಂದಾಗೋದೇ ಇಲ್ವೇನೋ ಅನ್ನುವಷ್ಟರ ಮಟ್ಟಿಗೆ ಜಗಳ ಆಡಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬದಂದು ಈ ಜೋಡಿ ಸ್ನೇಹಕ್ಕೆ ಬೆಲೆ ಕೊಟ್ಟು ಒಂದಾಗಿದ್ದಾರೆ. ‘ಬಿಗ್ ಬಾಸ್’ ಸಂಕ್ರಾಂತಿ ದಿನದಂದು, ನೀವು ನಿಮ್ಮ ಯಾವ ಒಂದು ಗುಣವನ್ನು ಬಿಡುತ್ತೀರಿ, ಯಾವ ಗುಣವನ್ನು ಇಲ್ಲಿಂದ ನಿಮ್ಮಲ್ಲಿ ಅಳವಡಿಸಿಕೊಳ್ಳುತ್ತೀರಿ ಹಾಗೂ ಯಾರೊಟ್ಟಿಗೆ ದ್ವೇಷವನ್ನು ಬಿಟ್ಟು ಸ್ನೇಹವನ್ನು ಬೆಳೆಸುತ್ತೀರಿ ಎಂದು ಸೂಚಿಸಿ ಆ ವ್ಯಕ್ತಿಯನ್ನು ಕರೆದು ಎಳ್ಳು ಬೆಲ್ಲ ನೀಡಿ ಎಂದು ಆದೇಶ ನೀಡಿದ್ದರು.
ಆಗ ಕಾರ್ತಿಕ್, ಇಲ್ಲಿ ನನ್ನ ಮುಂಗೋಪವನ್ನ ಬಿಡುತ್ತೇನೆ. ಯಾಕಂದ್ರೆ, ನಾನು ಬಹಳ ಬೇಗ ರಿಯಾಕ್ಟ್ ಮಾಡಿಬಿಡುತ್ತೇನೆ. ಆಮೇಲೆ ಕೊರಗೋದು ನಿಜ. ಸಂಗೀತಾ ಜೊತೆಗೆ ನಾನು ಎಷ್ಟೋ ವಿಷಯಗಳಲ್ಲಿ ಓವರ್ ಆಗಿ ರಿಯಾಕ್ಟ್ ಮಾಡಿ, ಕೋಪದಿಂದ ಮಾತಾಡಿದ್ದೇನೆ ಎಂದರು. ಬಳಿಕ ಸಂಗೀತಾರನ್ನು (Sangeetha) ಕರೆದು ಅವರಿಗೆ ಎಳ್ಳು-ಬೆಲ್ಲವನ್ನ ಕಾರ್ತಿಕ್ ತಿನ್ನಿಸಿದರು. ನನಗೆ ಇಲ್ಲಿ ಸಿಕ್ಕಿದ ಒಳ್ಳೆಯ ಫ್ರೆಂಡ್ ಸಂಗೀತಾ. ಈ ಸಂಕ್ರಾಂತಿ ಹಬ್ಬದಿಂದ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.