ಅರಣ್ಯ ಇಲಾಖೆಗೆ ಸೇರಿದ ಪಿಕಪ್ ವಾಹನ ಪಲ್ಟಿಯಾಗಿ, 10 ಮಂದಿ ಸಿಬ್ಬಂದಿಗೆ ತೀವ್ರವಾದ ಗಾಯಗೊಂಡ ಘಟನೆ ಯಡವನಾಡು ಬಳಿ ನಡೆದಿದೆ.
ಸೋಮವಾರಪೇಟೆ ವಲಯದ ಹುದುಗೂರು ವಿಭಾಗಕ್ಕೆ ಸೇರಿದ ಯಡವನಾಡು ಮೀಸಲು ಅರಣ್ಯಕ್ಕೆ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳನ್ನು ಮಧ್ಯಾಹ್ನ ಊಟಕ್ಕೆಂದು ಅರಣ್ಯದಿಂದ ಕರೆತರುವ ಸಂದರ್ಭ ಹುದುಗೂರು ಯಡವನಾಡು ಮಧ್ಯ ಭಾಗದ ಬಸವೇಶ್ವರ ದೇವಾಲಯದ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ. ಘಟನೆಯಲ್ಲಿ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಸೇರಿದಂತೆ ಸಿಬ್ಬಂದಿಗಳಾದ ವೆಂಕಟೇಶ್, ಸಚಿನ್, ವಿನು, ಸತೀಶ್, ಜೀವನ್, ಗಣೇಶ್, ಸುರೇಶ್, ಶ್ರೀಕಾಂತ್, ಹರೀಶ್ ಗಾಯಗೊಂಡವರು.
ಗಾಯಾಳುಗಳನ್ನು ಕುಶಾಲನಗರದ ಸಮುದಾಯದ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ, ಬಾಣವಾರ, ಮತ್ತು ಹೆಬ್ಬಾಲೆ ಉಪ ವಲಯ ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.