ಚಾಮರಾಜನಗರ: 2023ರನ್ನು ಕಳಿಸಿ 2024ಕ್ಕೆ ಸ್ವಾಗತ ಮಾಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಮುನ್ನೆಚ್ಚರಿಕಾಕ್ರಮವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ. ಅರಣ್ಯ ಇಲಾಖೆ ವಸತಿಗೃಹ, ಕಾಟೇಜ್ಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಹೇರಿದೆ.
ಇಂದು, ನಾಳೆ ಬಂಡೀಪುರದಲ್ಲಿ ಎಂದಿನಂತೆ ಸಫಾರಿ ನಡೆಯಲಿದೆ. ಆದರೆ ಅರಣ್ಯ ಇಲಾಖೆ ವಸತಿಗೃಹ ಹಾಗೂ ಬಂಡೀಪುರದ ಖಾಸಗಿ ರೆಸಾರ್ಟ್ಗಳಲ್ಲಿ ಮೋಜು ಮಸ್ತಿಗೆ ಬ್ರೇಕ್ ಹಾಕಿದೆ. ಡಿಜೆ ಡ್ಯಾನ್ಸ್, ಮೋಜು ಮಸ್ತಿ ಹಾಗೂ ಕಲರ್ ಲೈಟಿಂಗ್ಸ್ಗೆ ನಿರ್ಬಂಧ ಹೇರಲಾಗಿದೆ ಎಂದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.