ಬಳ್ಳಾರಿ:- ಕಾಂತರಾಜ್ ವರದಿ ಜಾರಿಗೆ ಒತ್ತಾಯಿಸಿ ಶೋಷಿತ ವರ್ಗಗಳಿಂದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೇಸ್ ಪಕ್ಷ ಇಂದು ರಾಜ್ಯದಲ್ಲಿ ಆಡಳಿತದಲ್ಲಿ ಇದೆ. ಶೋಷಿತ ವರ್ಗದ ನಾಯಕರಾದ ಸಿದ್ದರಾಮಯ್ಯ ಇಂದು ಮುಖ್ಯಮಂತ್ರಿ ಇದ್ದಾರೆ. ಆದರೆ ಅವರ ಸರ್ಕಾರದ ಇತರೆ ನಾಯಕರು ಕಾಂತರಾಜ್ ವರದಿಯನ್ನು ಜಾರಿಗೆ ತರದಂತೆ ಒತ್ತಾಯ ಹಾಕುತ್ತಿದ್ದಾರೆ.ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಬಹು ಸಂಖ್ಯಾತರಿದ್ದೆವೆ,
ಆದರೂ ಇಂದಿನ ಆಧುನಿಕ ಕಾಲದಲ್ಲಿಯು ಶೋಷಿತ ವರ್ಗಕ್ಕೆ ನ್ಯಾಯ ಸಿಗುತ್ತಿಲ್ಲ. ಇದು ಹೀಗೆ ಮುಂದುವರೆಯಬಾರದು ಎನ್ನುವ ನಿಟ್ಟಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶೋಷಿತ ವರ್ಗಕ್ಕೆ ಅನಾನುಕೂಲವಾಗುವ ನಿಟ್ಟಿನಲ್ಲಿ ಇಂದಿನ ಕೇಂದ್ರ ಸರ್ಕಾರಗಳು ವರ್ತಿಸುತ್ತಿವೆ. ಶೋಷಿತ ವರ್ಗಗಳಿಗೆ ಇರುವ ಸೌಲಭ್ಯಗಳನ್ನು ಸಾಕಷ್ಟು ಕಡಿತಗೊಳ್ಳಿಸಿದ್ದಾರೆ. ಈ ಕುರಿತು ಜನರನ್ನು ಜಾಗೃತಿಗೊಳ್ಳಿಸಲು ಇದೆ 22ಕ್ಕೆ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಸಮುದಾಯದ ಮುಖಂಡರು ಹೇಳಿದ್ದಾರೆ.