ಮಧುಮೇಹ ಎನ್ನುವುದು ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ಎಷ್ಟೇ ಸಿಹಿ ಪ್ರಿಯರಾಗಿದ್ದರೂ ಮಧುಮೇಹ ಬಂದ ಬಳಿಕ ಇದನ್ನು ಕಡೆಗಣಿಸಲೇಬೇಕು. ಇಷ್ಟು ಮಾತ್ರವಲ್ಲದೆ, ಆಹಾರದಲ್ಲಿ ಕೂಡ ತುಂಬಾ ಜಾಗೃತೆ ವಹಿಸಿ, ನಿತ್ಯವೂ ವ್ಯಾಯಾಮ ಅಥವಾ ನಡಿಗೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗಿ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಹುದು.
ಹಸುಗಳ ಕೆಚ್ಚಲು ಕೊಯ್ದ ಕೇಸ್; ಮಾಲೀಕನಿಗೆ 2 ಹಸು, 1 ಕರು ನೀಡಿದ ಪಿ.ಸಿ ಮೋಹನ್!
ಮಧುಮೇಹ ಇದ್ದಾಗ ವಿಪರೀತ ಪಥ್ಯ ಮಾಡುವಂತೆ ಹೇಳಲಾಗುತ್ತದೆ. ಆದರೆ ಪಥ್ಯದ ಬದಲು ಊಟಕ್ಕೆ ಅರ್ಧ ಗಂಟೆ ಮೊದಲು ಈ ಒಣಹಣ್ಣು ತಿಂದರೆ ಶುಗರ್ ಏರುವ ಪ್ರಶ್ನೆಯೇ ಎದುರಾಗುವುದಿಲ್ಲ.
ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಭೋಜನ ಹೀಗೆ ಯಾವಾಗಲಾದರು ಸರಿ ಆಹಾರ ಸೇವನೆಯ ಅರ್ಧ ಗಂಟೆ ಮೊದಲು ಈ ಒಣ ಹಣ್ಣು ತಿನ್ನಬೇಕು.
ಹೌದು, ಆಹಾರ ಸೇವನೆಯ ಅರ್ಧ ಗಂಟೆ ಮುನ್ನ ಬಾದಾಮಿಯನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಶಾಶ್ವತವಾಗಿ ನಿಯಂತ್ರಣದಲ್ಲಿರುತ್ತದೆ. ಗ್ಲೂಕೋಸ್ ಮಟ್ಟವೂ ಕಡಿಮೆಯಾಗಬಹುದು.
ಬಾದಾಮಿಯಲ್ಲಿ ಹೇರಳವಾದ ಮೊನೊ- ಎನ್ ಸ್ಯಾಚ್ಯುರೆಟೆಡ್ ಫ್ಯಾಟ್, ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ.
ಬ್ಲಡ್ ಶುಗರ್ ಹೆಚ್ಚಾಗುವುದು ಆಹಾರ ಸೇವಿಸಿದ ಮೇಲೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದನ್ನು ಕಂಟ್ರೋಲ್ ಮಾಡಬೇಕಾದರೆ ಆಹಾರ ಸೇವಿಸುವ ಅರ್ಧ ಗಂಟೆ ಮುನ್ನ 20 ಗ್ರಾಂ ಬಾದಾಮಿ ತಿನ್ನಿರಿ
ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ಸುಲಿದೇ ತಿನ್ನಬೇಕು. ಸಿಪ್ಪೆ ಸಹಿತ ಬಾದಾಮಿಯನ್ನು ಎಂದೂ ಸೇವಿಸಬಾರದು. ಹೀಗೆ ಸೇವಿಸಿದರೆ ಬ್ಲಡ್ ಪ್ರೆಶರ್ ಕೂಡಾ ನಿಯಂತ್ರಣದಲ್ಲಿ ಇರುತ್ತದೆ.