ಬೆಂಗಳೂರು:- ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವಂತ ಘಟನೆ ನಡೆದಿದೆ
World Cup 2024: ಇಂದು ಭಾರತ V/s ಇಂಗ್ಲೆಂಡ್ ಸೆಮಿಫೈನಲ್.. ಪಂದ್ಯಕ್ಕೆ ಮಳೆ ಭೀತಿ..!
ಅಜ್ಜನೋರ್ವ ತನ್ನ ಆರು ವರ್ಷದ ಬಾಲಕಿ ಮೇಲೆ ಹೇಯ ಕೃತ್ಯವೆಸಗಿದ್ದಾನೆ. ಈ ವಿಚಾರ ಬಾಲಕಿ ಮನೆಯಲ್ಲಿ ಗೊತ್ತಾಗುತ್ತಿದ್ದಂತೆಯೇ ಯಾರಿಗೂ ಹೇಳದಂತೆ ಬಾಲಕಿ ತಾಯಿಗೆ(ಸೊಸೆ) ಬಂಗಾರ, ಮನೆ ಆಮಿಷವೊಡ್ಡಿದ್ದಾನೆ. ಆದ್ರೆ, ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೆನೆಯಿಂದ ಪರಾರಿಯಾಗಿದ್ದಾನೆ. ದುರಂತ ಅಂದ್ರೆ, ಆರೋಪಿ ಪರಾರಿಯಾಗಲು ಮಗನೇ (ಬಾಲಕಿ ತಂದೆ) ಸಹಕರಿಸಿದ್ದಾನೆ.
ಸುಮಾರು 6 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಘಟನೆ ನಂತರ ಮೊಮ್ಮಗಳ ತಾಯಿ ಮತ್ತು ತಂದೆಗೆ ನಿನ್ನ ಮಗಳ ಹೆಸರಿಗೆ ಮನೆ ಬರೆದು ಕೊಡುತ್ತೇನೆ ಪೊಲೀಸರಿಗೆ ದೂರು ಕೊಡಬೇಡಿ ಎಂದು ಆಮಿಷವೊಡಿದ್ದಾನೆ. ಆದರೆ, ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಇದಾದ ನಂತರ ಸುಮ್ಮನಿದ್ದ ಬಾಲಕಿಯ ತಾಯಿ ನಾನು ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಅಲ್ಲಿಗೆ ಬಂದ ಪೊಲೀಸರು ತಾಯಿಗೆ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ತಾಯಿ, ಮಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿ ಹುಳಿಮಾವು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೂಲತಃ ತಮಿಳುನಾಡು ಮೂಲದ ಕುಟುಂಬ ಬಂದು ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ನೆಲೆಸಿದೆ. ಬಾಲಕಿಯ ತಾಯಿ ನೀಡಿದ ದೂರಿನಂತೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)