ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಈ ಹಬ್ಬದ ಸಮಯದಲ್ಲಿ ಸಂಭ್ರಮ ಕಳೆಗಟ್ಟಬೇಕು ಎಂದರೆ ಮನೆ ಅಲಂಕಾರ ಚೆನ್ನಾಗಿರಬೇಕು. ಗೋಡೆಯಿಂದ ಹಿಡಿದು ನೆಲಹಾಸಿನವರೆಗೆ ಬದಲಿಸಿ ಅಂದ ಹೆಚ್ಚಿಸಬಹುದು. ಹಬ್ಬದ ಸಮಯದಲ್ಲಿ ನಿಮ್ಮ ಮನೆ ಅಲಂಕಾರಕ್ಕೆ ಇಲ್ಲಿದೆ 6 ಟಿಪ್ಸ್.
ಹೂಗಳಿಂದ ಅಲಂಕರಿಸಿ
ತಾಜಾ ಹೂಗಳಿಂದ ಮನೆಯನ್ನು ಅಲಂಕರಿಸುವ ಮೂಲಕ ನವರಾತ್ರಿ ಅಲಂಕಾಲಕ್ಕೆ ಹೊಸ ಹುರುಪು ನೀಡಬಹುದು. ಮನೆಯ ಸುತ್ತಲೂ ಚೆಂಡು ಹೂಗಳಿಂದ ಹೂಮಾಲೆ ಮಾಡಿ ನೇತು ಹಾಕಿ. ಲೀವಿಂಗ್ ರೂಮ್ ಹಾಗೂ ಪೂಜೆ ರೂಮ್ನಲ್ಲೂ ಹೂವಿನ ಅಲಂಕಾರವಿರಲಿ. ಹೂದಾನಿಗಳಲ್ಲಿ ಹೂಗಳನ್ನು ಅಂದವಾಗಿ ಜೋಡಿಸಿ. ಅವುಗಳನ್ನು ಮೇಜಿನ ಮೇಲೆ ಹಾಲ್ನ ಮಧ್ಯಭಾಗ ಇರಿಸಿ. ಪೂಜೆ ಮನೆಯಲ್ಲಿ ಹೂದಾನಿ ಇರಿಸಬಹುದು. ಕೆಲವು ಎಲೆಗಳಿಂದಲೂ ಮನೆಯನ್ನು ಅಲಂಕರಿಸಬಹುದು. ಮಾವಿನ ಎಲೆಯ ತೋರಣವು ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಆಧ್ಯಾತ್ಮ ನೋಟ ಸಿಗುವಂತೆ ಮಾಡುತ್ತದೆ.
ಲೈಟ್ ಹಾಗೂ ಲ್ಯಾಂಪ್ಗಳು
ಸ್ಟ್ರಿಂಟ್ ಲೈಟ್ಗಳು, ಲ್ಯಾಟರ್ನ್ಸ್ಗಳು ಹಾಗೂ ಸಾಂಪ್ರದಾಯಿಕ ದೀಪಗಳು ನಿಮ್ಮ ಮನೆಯನ್ನು ಬೆಳಗಲಿ. ಇವು ಮನೆಗೆ ಹಬ್ಬದ ಕಳೆ ತಂದು ಕೊಡುವುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಬಣ್ಣ ಬಣ್ಣದ ಎಲ್ಇಡಿ ಬೆಳಕನ್ನು ಕೂಡ ಬಳಸಬಹುದು. ಹಬ್ಬದ ಸಮಯದಲ್ಲಿ ಸುಗಂಧ ಬೀರುವ ಮೇಣದಬತ್ತಿಗಳನ್ನು ಕೂಡ ಹಚ್ಚಬಹುದು. ಕ್ಯಾಂಡಲ್ ಅಥವಾ ಲ್ಯಾಂಟರ್ನ್ಗಳನ್ನು ಮನೆಯ ಹೊರ ಭಾಗ ಅಥವಾ ಬಾಲ್ಕನಿಗಳನ್ನು ಅಲಂಕರಿಸಲು ಬಳಸಬಹುದು. ಇವು ನಿಮ್ಮ ಮನೆಗೆ ಬೇರೆಯದ್ದೇ ಲುಕ್ ಕೊಡುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.
ಗೋಡೆ ಅಲಂಕಾರ
ಗೋಡೆಗೆ ನೇತು ಹಾಕುವ ಚಿತ್ರಗಳು ಹಾಗೂ ಕಲಾತ್ಮಕ ದೇವಿ ಅಥವಾ ದೇವರ ಕರಕುಶಲ ವಸ್ತುಗಳನ್ನು ಇರಿಸಬಹುದು. ಬಟ್ಟೆಯ ವಿನ್ಯಾಸಗಳಿಂದಲೂ ಗೋಡೆಯನ್ನು ಅಲಂಕರಿಸಬಹುದು. ಪೇಪರ್ ಗೂಡುದೀಪಗಳು ಕೂಡ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಬಹುದು. ರಾತ್ರಿ ವೇಳೆಯಂತೂ ಈ ಅಲಂಕಾರ ನಿಮ್ಮ ಮನೆಯನ್ನು ಸ್ವರ್ಗದಂತೆ ಕಾಣುವಂತೆ ಮಾಡುತ್ತವೆ.
ಬಣ್ಣದ ಕರ್ಟನ್ ಹಾಗೂ ಕುಷನ್ಗಳು
ಹಬ್ಬದ ಸಮಯದಲ್ಲಿ ಧಾಳ ಬಣ್ಣದ ಕರ್ಟನ್, ಕುಷನ್ಗಳನ್ನು ಬಳಸಬೇಕು. ಇದರಿಂದ ಅಂದ ಹೆಚ್ಚುವ ಜೊತೆಗೆ ಮನೆಯ ಕಳೆಯೂ ಹೆಚ್ಚುತ್ತದೆ. ಕುಷನ್ ಪಿಲ್ಲೋಗಳನ್ನು ಹಬ್ಬದ ಸಮಯದಲ್ಲಿ ಬದಲಿಸಿ. ಕೆಂಪು, ಹಳದಿ, ಹಸಿರು, ನೀಲಿ ಇಂತಹ ಡಾರ್ಕ್ ಬಣ್ಣದ ಬಟ್ಟೆಗಳನ್ನು ಬಳಸಿ.
ಹೊರಗಿನ ಅಲಂಕಾರ
ಮನೆಯ ಒಳಗೆ ಮಾತ್ರ ಅಲಂಕರಿಸಿ ಹೊರಗೆ ಅಲಂಕಾರ ಮಾಡದೇ ಇರುವುದು ಸರಿಯಲ್ಲ. ಮನೆಯ ಒಳಗೂ ಹೊರಗೂ ಸುಂದರವಾಗಿ ಕಾಣುವಂತೆ ಅಲಂಕರಿಸುವುದು ಹಬ್ಬದ ಸಮಯದಲ್ಲಿ ಮುಖ್ಯವಾಗುತ್ತದೆ. ಇದರಿಂದ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.
ಬಣ್ಣಗಳ ಆಯ್ಕೆ
ಬಣ್ಣದ ಸಮಯದಲ್ಲಿ ಬಣ್ಣಗಳಿಂದ ಮನೆಯನ್ನು ಅಲಂಕರಿಸುವ ಯೋಚನೆ ಇದ್ದರೆ ಮೊದಲು ಬಣ್ಣಗಳನ್ನು ಆಯ್ಕೆ ಮಾಡಿ. ಯಾವ ಬಣ್ಣ ಹೊಂದುತ್ತದೆ ಎಂಬುದನ್ನು ತಿಳಿಯಿರಿ. ನವರಾತ್ರಿ ಹಬ್ಬದ ಎಂದರೆ ಬಣ್ಣಗಳ ಹಬ್ಬ. ದೀಪಾವಳಿಯಲ್ಲೂ ಬಣ್ಣಗಳು ದೀಪಗಳಿಗೆ ಹೊಂದುವಂತೆ ಇರಬೇಕು. ಮನೆಗೆ ಬಳಸುವ ಪೇಂಟ್ ಮಾನಸಿಕ ಖುಷಿಗೂ ಕಾರಣವಾಗಬೇಕು.