ಬೇಸಿಗೆಯಲ್ಲಿ ಬಹುತೇಕರಲ್ಲಿ ಒಣ ಹಾಗೂ ಸುಕ್ಕುಗಟ್ಟಿದ ಕೂದಲಿನ ಸಮಸ್ಯೆಯು ಕಂಡು ಬರುತ್ತದೆ. ಇದರಿಂದ ಕೂದಲು ಉದುರುವುದಕ್ಕೂರುವುದಕ್ಕೂ ಆರಂಭವಾಗುತ್ತದೆ. ನಿರ್ಲಕ್ಷ್ಯ ಮಾಡಿದರೆ ಕ್ರಮೇಣವಾಗಿ ಕೂದಲಿನ ಸೌಂದರ್ಯವೇ ಹಾಳಾಗುತ್ತದೆ.
ರಾಹುಲ್ ಗಾಂಧಿ ಪ್ರಜ್ವಲ್ ಬಗ್ಗೆ ನಿಜ ಅರಿಯದೆ ಹೇಳಿಕೆ ನೀಡ್ತಿದ್ದಾರೆ – ಸಿಟಿ ರವಿ..!
ಬೇಸಿಗೆಯಲ್ಲಿ ನಿಮ್ಮ ಕೂದಲು ತುಂಬಾ ಎಣ್ಣೆಯುಕ್ತವಾಗಿದ್ದರೆ ಸ್ನಾನ ಮಾಡುವಾಗ ಶಾಂಪೂ ಬಳಸುವುದು ಒಳ್ಳೆಯ ಅಭ್ಯಾಸ.
ವಾರಕ್ಕೆ ಎರಡು ಬಾರಿಯಾದರೂ ಮೊಸರಿನ ಹೇರ್ ಪ್ಯಾಕ್ ಬಳಸುತ್ತಿದ್ದರೆ ಒಳ್ಳೆಯದು. ಒಂದು ಕಪ್ ಮೊಸರು, ಒಂದು ಚಮಚದಷ್ಟು ನಿಂಬೆ ರಸ, ಅಡುಗೆ ಸೋಡಾ, ಒಂದು ಮೊಟ್ಟೆಯ ಬಿಳಿಭಾಗವನ್ನು ಬೆರೆಸಿ ಕೂದಲಿಗೆ ಹಚ್ಚಿ ಸ್ನಾನ ಮಾಡಿದರೆ ಈ ಸಮಸ್ಯೆಯು ಪರಿಹಾರವಾಗುತ್ತದೆ.
ಬೇಸಿಗೆಯಲ್ಲಿ ಎಣ್ಣೆಯುಕ್ತ ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಲು ನಿಂಬೆ ಮತ್ತು ಕಿತ್ತಳೆ ಸಿಪ್ಪೆಯನ್ನು ಬಳಸುವುದು ಪರಿಣಾಮಕಾರಿಯಾಗಿದೆ. ಸಿಪ್ಪೆಗಳನ್ನು ಒಣಗಿಸಿ ಮಾಡಿದ ಪುಡಿಗೆ ಸ್ವಲ್ಪ ನೀರು ಬೆರೆಸಿ ಕೂದಲಿಗೆ ಹಚ್ಚಿ ತೊಳೆದರೆ ಈ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.
ಲೋಳೆಸರಕ್ಕೆ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕೂದಲು ಮತ್ತು ನೆತ್ತಿಗೆ ಹಚ್ಚಿ ಹತ್ತು ಹದಿನೈದು ನಿಮಿಷಗಳ ಕಾಲ ತೊಳೆದರೆ ಎಣ್ಣೆಯುಕ್ತ ಕೂದಲು ನಿವಾರಣೆಯಾಗುತ್ತದೆ.
ಜೇನುತುಪ್ಪಕ್ಕೆ ಒಂದೆರಡು ಹನಿ ನೀರು ಬೆರೆಸಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಶೀಘ್ರ ಪರಿಹಾರ ದೊರೆಯುತ್ತದೆ.