ಬೆಂಗಳೂರು:- ರಾಜಧಾನಿ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಾಳೆಯಿಂದ 12 ದಿನಗಳವರೆಗೆ ಫ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಹೀಗಾಗಿ ಫ್ಲವರ್ ಶೋಗೆ ಬರುವ ಜನರಿಗೆ ವಾಹನ ನಿಲುಗಡೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರಮುಖ 9 ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ.
ಈ ಆಹಾರಗಳನ್ನು ತಿನ್ನೋ ಮುನ್ನಾ ಎಚ್ಚರ: ಅತಿಯಾಗಿ ತಿಂದ್ರೆ ಕೀಲು ನೋವು ಪಕ್ಕಾ!
ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕ್ರಮಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ಬಿಎಂಟಿಸಿ ಬಸ್, ಮೆಟ್ರೋ, ಕ್ಯಾಬ್ಗಳನ್ನು ಬಳಸಲು ಮನವಿ ಮಾಡಿದ್ದಾರೆ.
ವಾಹನಗಳ ನಿಲುಗಡೆಗೆ ಅವಕಾಶ
ಮರಿಗೌಡ ರಸ್ತೆಯ ಆಲ್ ಅಮೀನ್ ಕಾಲೇಜ್ ಆವರಣದಲ್ಲಿ ಬೈಕ್ ಪಾರ್ಕಿಂಗ್
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೇಲೆ ನಾಲ್ಕು ಚಕ್ರದ ವಾಹನ ನಿಲುಗಡೆ ವ್ಯವಸ್ಥೆ
ಮರಿಗೌಡ ರಸ್ತೆಯ ಹಾಪ್ ಕಾಮ್ಸ್ನಲ್ಲಿ ಬೈಕ್ ಹಾಗೂ ಕಾರು ನಿಲುಗಡೆ
ಜೆ.ಸಿ. ರಸ್ತೆ ಕಾರ್ಪೋರೇಷನ್ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಹಾಗೂ ಕಾರು ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಪಾರ್ಕಿಂಗ್ ನಿಷೇಧ
ಡಾ. ಮರಿಗೌಡ ರಸ್ತೆ, ಲಾಲ್ಬಾಗ್ ಮುಖ್ಯದ್ವಾರದಿಂದ ನಿಮ್ಹಾನ್ಸ್ವರೆಗೆ ರಸ್ತೆಯ ಎರಡು ಬದಿ
ಕೆ.ಹೆಚ್.ರಸ್ತೆ, ಕೆ.ಹೆಚ್.ವೃತ್ತದಿಂದ ಶಾಂತಿನಗರ ಜಂಕ್ಷನ್ವರೆಗೆ ರಸ್ತೆಯ ಎರಡು ಬದಿ
ಲಾಲ್ಬಾಗ್ ರಸ್ತೆ, ಸುಬ್ಬಯ್ಯ ವೃತ್ತದಿಂದ ಲಾಲ್ಭಾಗ್ ಮುಖ್ಯದ್ವಾರದ ವರೆಗೆ
ಸಿದ್ದಯ್ಯ ರಸ್ತೆ, ಊರ್ವಶಿ ಥಿಯೇಟರ್ ಜಂಕ್ಷನ್ನಿಂದ ವಿಲ್ಸನ್ ಗಾರ್ಡನ್ 12ನೇ ಕ್ರಾಸ್ವರೆಗೆ
ಬಿಟಿಎಸ್ ಬಸ್ ನಿಲ್ದಾಣ, ಬಿಎಂಟಿಸಿ ಜಂಕ್ಷನ್ನಿಂದ ರಸ್ತೆಯ ಎರಡು ಬದಿಗಳಲ್ಲಿ
ಕೃಂಬಿಗಲ್ ರಸ್ತೆಯ ಎರಡು ಕಡೆಗಳಲ್ಲಿ
ಲಾಲ್ಬಾಗ್ ವೆಸ್ಟ್ಗೇಟ್ನಿಂದ ಆರ್.ವಿ. ಟೀರ್ಸ್ ಕಾಲೇಜ್ವರೆಗೆ
ಆರ್ವಿ ಟೀರ್ಸ್ ಕಾಲೇಜ್ನಿಂದ ಅಶೋಕ ಪಿಲ್ಲರ್ವರೆಗೆ
ಅಶೋಕ ಪಿಲ್ಲರ್ನಿಂದ ಸಿದ್ದಾಪುರ ಜಂಕ್ಷನ್ ವರೆಗೆ