ನ್ಯೂಯಾರ್ಕ್: ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್-ಹಾಲಿವುಡ್ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಭೂಸ್ಪರ್ಷ ಮಾಡಿದ ಜೆಟ್ಬ್ಲೂ ವಿಮಾನದ ಲ್ಯಾಂಡಿಂಗ್ ಗೇರ್ನಲ್ಲಿ ಎರಡು ಮೃತದೇಹಗಳು ಪತ್ತೆಯಾಗಿರುವುದಾಗಿ ಏರ್ಲೈನ್ ಅಸೋಸಿಯೇಟೆಡ್ ಮಾಹಿತಿ ನೀಡಿದೆ.
ವಿಮಾನದ ನಿಗದಿತ ಪ್ರಯಾಣ ಮುಗಿದ ಬಳಿಕ ನಡೆಸಲಾಗುವ ಪರಿಶೀಲನೆಯ ಸಂದರ್ಭದಲ್ಲಿ ಎರಡು ಮೃತದೇಹಗಳು ಲ್ಯಾಂಡಿಂಗ್ ಗೇರ್ ನಲ್ಲಿ ಪತ್ತೆಯಾಗಿವೆ. ನ್ಯೂಯಾರ್ಕ್ನ ಜೆಎಫ್ಕೆ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 3 ಗಂಟೆಗಳ ಪ್ರಯಾಣದ ಬಳಿಕ ಲಾಡರ್ಡೇಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಮೃತವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
“ಮೃತ ವ್ಯಕ್ತಿಗಳ ಗುರುತುಗಳು ಮತ್ತು ಅವರು ವಿಮಾನವನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜೆಟ್ ಬ್ಲೂ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
“ಇದು ಹೃದಯವಿದ್ರಾವಕ ಪರಿಸ್ಥಿತಿಯಾಗಿದೆ, ಮತ್ತು ಇದು ಹೇಗೆ ಸಂಭವಿಸಿತು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಎಂದು ಏರ್ಲೈನ್ಸ್ ಹೇಳಿದೆ.