ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ ಅವರ 74ನೇ ವರ್ಷದ ಜಯಂತಿ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳಿಂದ ತಡೆಯೊಡ್ಡಿದ ಹಿನ್ನೆಲೆ ಅಭಿಮಾನ್ ಸ್ಟುಡಿಯೋ ಮುಂದೆ ದಿ. ಡಾ.ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ದಿ. ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು (Vishnu Fans) ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದಾರೆ. ದೂರದೂರುಗಳಿಂದ ಬೆಳ್ಳಂಬೆಳಗ್ಗೆಯೇ ಬಂದು ಸಾಲುಗಟ್ಟಿ ನಿಂತಿದ್ದಾರೆ. ಆದ್ರೆ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ತಡೆಯೊಡ್ಡಿದ್ದಾರೆ. ಸ್ಟುಡಿಯೋ ಗೇಟ್ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಅಲ್ಲಿಗೇ ಹೋಗಿ ಪೂಜೆ ಮಾಡುವಂತೆ ಖಾರವಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.
ವಿಷ್ಣುವರ್ಧನ್ ಮಂಟಪಕ್ಕೆ ಹೂವಿನ ಅಲಂಕಾರ ಸಿದ್ದತೆ ಮಾಡುತ್ತಿರುವ ಸಂಘಟನಕಾರರು ವಿಷ್ಣು ಸ್ಮಾರಕ ದತ್ತ ಹೂ ಗುಚ್ಚು ಹಿಡಿದ ಬಂದಿರುವ ಅಭಿಮಾನಿಗಳು ಸದ್ಯ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲು ಮಾತ್ರ ಅನುಮತಿ ನೀಡಿರುವ ಜಿಲ್ಲಾಧಿಕಾರಿ.. ಬೇರೆ ಯಾವುದೇ ಚಟುವಟಿಕೆ ನಡೆಸಿ ಗೊಂದಲ ಸೃಷ್ಟಿಸಬಾರದು ಎಂದು ಆದೇಶ ಹೀಗಾಗಿ ರಕ್ತದಾನ ಶಿಬಿರ, ಅನ್ನದಾನ,ಮುಂತಾದ ಕಾರ್ಯಕ್ರಮಕ್ಕೆ ಒಳಗಡೆ ಅವಕಾಶ ಇಲ್ಲ
ಅಭಿಮಾನ್ ಸ್ಟುಡಿಯೋದಿಂದ ಹೊರಗಡೆ ಪೆಂಡಲ್ ಹಾಕಿಕೊಂಡಿರುವ ಆಯೋಜಕರು ವಿಷ್ಣು ದರ್ಶನಕ್ಕೆ ಹೊರಗಡೆ ನಿಂತು ಕಾಯುತ್ತಿರುವ ಅಭಿಮಾನಿಗಳು.. ಸದ್ಯ ಮಂಟಪಕ್ಕೆ ಹೂವಿನ ಅಲಂಕಾರ ನಡೆಯುತ್ತಿದೆ ಕೆಲವೇ ಕ್ಷಣಗಳಲ್ಲಿ ವಿಷ್ಣು ದರ್ಶನಕ್ಕೆ ಅವಕಾಶ ಮಾಡಿಕೊಡಲಿರುವ ಪೊಲೀಸರು ಸ್ಟುಡಿಯೋ ಸುತ್ತಮುತ್ತ ಬಾರಿ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿದೆ.