ಕನ್ನಡಿಗ ಕೆ.ಎಲ್.ರಾಹುಲ್. ಪಕ್ಕಾ ಕ್ಲಾಸ್ ಬ್ಯಾಟ್ಸ್ಮನ್. ಕಂಡೀಷನ್ಸ್ ಯಾವುದೇ ಆಗಿರಲಿ, ಸರಾಗವಾಗಿ ರನ್ ಗಳಿಸುವ ಚಾಕಚಕ್ಯತೆ ಕನ್ನಡಿಗನಿಗಿದೆ. ಆದ್ರೀಗ ಇದೇ ರಾಹಲ್, ಈಗ ಒಂದೊಂದೇ ಫಾರ್ಮೆಟ್ನಿಂದ ದೂರ ಹೋಗ್ತಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ. ಅದಕ್ಕೆ ಕಾರಣ ದುಲೀಪ್ ಟ್ರೋಪಿ
ಕೊಲೆ ಪ್ರಕರಣ: ನಾಳೆ ದರ್ಶನ್ ಬಂಧನ ಅವಧಿ ಮುಕ್ತಾಯ, ಜಾಮೀನು ಅರ್ಜಿ ಸಲ್ಲಿಸಲು ದಾಸ ತಯಾರಿ!
ದುಲೀಪ್ ಟ್ರೋಪಿ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಕಮ್ಬ್ಯಾಕ್ಗೆ ವೇದಿಕೆಯಾಗಿತ್ತು. ಹೀಗಾಗಿ ದುಲೀಪ್ ಟ್ರೋಪಿಯಲ್ಲಿ ಕಮಾಲ್ ಮಾಡಿ, ಬಾಂಗ್ಲಾ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯೋದು ಬಹುತೇಕರ ಪರಮ ಗುರಿಯಾಗಿದೆ. ಈ ಪೈಕಿ ಕೆ.ಎಲ್.ರಾಹುಲ್ ಕೂಡ ಒಬ್ಬರು. ಈ ಮೊದಲ ಅಗ್ನಿಪರೀಕ್ಷೆಯಲ್ಲೇ ರಾಹುಲ್, ಫೇಲ್ಯೂರ್ ಆಗಿದ್ದಾರೆ.
ಚಿನ್ನಸ್ವಾಮಿಯಲ್ಲಿ ಭಾರತ ಬಿ ಎದುರಿನ ಪಂದ್ಯ ಕೆ.ಎಲ್.ರಾಹುಲ್ ಪಾಲಿಗೆ ಮೋಸ್ಟ್ ಕ್ರೂಶಿಯಲ್ ಆಗಿತ್ತು. ಈ ಪಂದ್ಯದಲ್ಲಿ ಕಣಕ್ಕಿಳಿದ ಕೆ.ಎಲ್.ರಾಹುಲ್, ನೆಚ್ಚಿನ ಹೋಮ್ ಗ್ರೌಂಡ್ನಲ್ಲೇ ರನ್ ಗಳಿಸಲು ಪರದಾಡಿದ್ರು. ಬರೋಬ್ಬರಿ 111 ಎಸೆತಗಳನ್ನ ಎದುರಿಸಿದ ಕನ್ನಡಿಗ ರಾಹುಲ್, ಗಳಿಸಿದ್ದು ಜಸ್ಟ್ 37 ರನ್.. ಆದ್ರೀಗ ಇದೇ ಆಟ ಕೆ.ಎಲ್.ರಾಹುಲ್ ಟೆಸ್ಟ್ ತಂಡದ ಸ್ಥಾನಕ್ಕೆ ಕುತ್ತು ತಂದಿದೆ.
ಕೆ.ಎಲ್.ರಾಹುಲ್ ಟೆಸ್ಟ್ ತಂಡಕ್ಕೆ ಹೇಳಿ ಮಾಡಿಸಿದ ಆಟಗಾರ. ಆದ್ರೀಗ ಅದೇ ರಾಹುಲ್ ಟೆಸ್ಟ್ ತಂಡದ ಸ್ಥಾನ ಇಕ್ಕಟ್ಟಿಗೆ ಸಿಲುಕಿದೆ. ಬ್ಯಾಟ್ಸ್ಮನ್ ಆಗಿಯೇ ಅಲ್ಲ. ವಿಕೆಟ್ ಕೀಪರ್ ಕೋಟಾದಲ್ಲೂ ಕೆ.ಎಲ್.ರಾಹುಲ್ ಡೋರ್ ಕಂಪ್ಲೀಟ್ ಕ್ಲೋಸ್. ಇದಕ್ಕೆ ಕಾರಣ ರಾಹುಲ್ರ ವೈಫಲ್ಯ ಒಂದಾದ್ರೆ ಸಾಲು ಸಾಲು ಆಟಗಾರರ ಪೈಪೋಟಿ ಮತ್ತೊಂದು.
ಹೌದು! ರಿಷಭ್ ಪಂತ್ ಫಸ್ಟ್ ಚಾಯ್ಸ್ ಪ್ಲೇಯರ್ ಆಗಿದ್ದಾರೆ. ಇದಕ್ಕೆ ತಕ್ಕಂತೆಯೇ ದುಲೀಪ್ ಟ್ರೋಪಿಯ ಸ್ಪೋಟಕ 60 ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಬ್ಯಾಕ್ ಆಪ್ ಆಗಿ ಧೃವ್ ಜುರೇಲ್ ಸೆಲೆಕ್ಷನ್ ಕಮಿಟಿಯ ಆಯ್ಕೆ ಆಗೋದು ಬಹುತೇಕ ಫಿಕ್ಸ್. ವಿಕೆಟ್ ಕೀಪರ್ ಹೊರತಾದ ಸ್ಲಾಟ್ನಲ್ಲೂ ಕೆ.ಎಲ್.ರಾಹುಲ್ಗೆ ಅವಕಾಶ ಮುಚ್ಚಿದೆ.
ಇದಕ್ಕೆ ಕಾರಣ ಶ್ರೇಯಸ್ ಅಯ್ಯರ್ ಅಂಡ್ ಸರ್ಫರಾಜ್ ಖಾನ್
ಮಿಡಲ್ ಆರ್ಡರ್ನಲ್ಲಿ ಅಬ್ಬರಿಸಬಲ್ಲ ಸರ್ಫರಾಜ್ ಖಾನ್ ಹಾಗೂ ಶ್ರೇಯಸ್ ಅಯ್ಯರ್, ಸದ್ಯ ದುಲೀಪ್ ಟ್ರೋಪಿಯಲ್ಲಿ ಸಾಲಿಡ್ ಪರ್ಫಾಮೆಮ್ಸ್ ನೀಡಿದ್ದಾರೆ. ಅದ್ರಲ್ಲೂ ಯಂಗ್ ಬ್ಯಾಟರ್ ಸರ್ಫರಾಜ್, ಈ ಹಿಂದಿನ ಇಂಗ್ಲೆಂಡ್ ಸರಣಿಯಲ್ಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯ ಜೊತೆ ಜೊತೆಗೆ ಅಗ್ರೆಸ್ಸಿವ್ ಬ್ಯಾಟಿಂಗ್ ಆಡಬಲ್ಲೆ ಅನ್ನೋದು ತೂರಿಸಿಕೊಟ್ಟಿದ್ದಾರೆ. ಹೀಗಾಗಿ ಕೆ.ಎಲ್.ರಾಹುಲ್ಗೆ ಸರ್ಫರಾಜ್ ಖಾನ್ ವಿಲನ್ ಆಗದರ ಅಚ್ಚರಿ ಇಲ್ಲ.