ಕಲಬುರಗಿ: ಸರ್ಕಾರಿ ಶಾಲೆ ಮಕ್ಕಳನ್ನ ಬಸ್ ಟ್ರೈನ್ ನಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗೊದನ್ನ ನಾವು ನೀವು ನೋಡಿದ್ದೆವೆ..ಆದ್ರೆ ಇಲ್ಲೊಂದು ಸರ್ಕಾರಿ ಶಾಲೆಯ ಮಕ್ಕಳನ್ನ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕ ಮಕ್ಕಳಿಗೆ ವಿಮಾನಯಾನ ಭಾಗ್ಯ ಕಲ್ಪಿಸಿದ್ದಾರೆ.
ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮೈಂದರ್ಗಿ ಗ್ರಾಮದಲ್ಲಿರುವ ಕನ್ನಡ ಮಾದ್ಯಮ ಶಾಲೆಯ ಮಕ್ಕಳನ್ನ ಅಲ್ಲಿನ ಮುಖ್ಯ ಶಿಕ್ಷಕ ಮಹಾಂತೇಶ್ ಕಟ್ಟಿಮನಿ ಮಕ್ಕಳಿಂದ ಎಷ್ಟು ಆಗುತ್ತೋ ಅಷ್ಟು ಪ್ರವಾಸ ಹಣವನ್ನ ಸಂಗ್ರಹಿಸಿ ಉಳಿದ ಪ್ರವಾದಸ ಹಣವನ್ನ ತಾವು ಭರಿಸಿ ಮುಂಬೈನಿಂದ ವಿಮಾನದ ಮೂಲಕ ದೇಹಲಿಗೆ ಕರೆದುಕೊಂಡು ಹೋಗಿ ಸಂಸತ್ ಭವನ ,ರಾಷ್ಟ್ರಪತಿ ಭವನ , ಕೆಂಪುಕೋಟೆ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನ ತೋರಿಸಿಕೊಂಡು ಬಂದಿದ್ದಾರೆ.
ಹಳ್ಳಿಯ ಮಕ್ಕಳು ತಮ್ಮ ಊರಲ್ಲಿ ಆಕಾಶದಲ್ಲಿ ಹಾರಾಡುವ ವಿಮಾನವನ್ನ ಕಂಡು ಖುಷಿ ಪಡಡ್ತಿದ್ದವರು ಇದೀಗ ವಿಮಾನದಲ್ಲೆ ಪ್ರಯಾಣ ಮಾಡಿರೋದ್ರಿಂದ ಮಕ್ಕಳ ಸಂತಸಕ್ಕೆ ಪರಾವೆ ಇರಲಿಲ್ಲ..ಇನ್ನೂ ಮಕ್ಕಳ ಪೋಷಕರು ಕೂಡ ನಮ್ಮ ಮಕ್ಕಳು ವಿಮಾನ ಪ್ರಯಾಣ ಮಾಡಿರೋದು ತುಂಬಾ ಖುಷಿಯಾಗಿದೆ ಅಂತಾ ಸಂತಸ ವ್ಯೆಕ್ತಪಡಿಸಿದ್ದಾರೆ…