ಬೆಂಗಳೂರು: ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದ ಫಿಟ್ನೆಸ್ ತರಬೇತುದಾರ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
45 ವಯಸ್ಸಿನ ಸೈಕ್ಲಿಸ್ಟ್, ಫಿಟ್ನೆಸ್ ತರಬೇತುದಾರ ಅನೀಲ್ ಕಡ್ಸೂರ್ ಶುಕ್ರವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾದರು. ತೀವ್ರ ಅಸ್ವಸ್ಥರಾಗಿದ್ದ ಅನೀಲ್ರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ
ಪ್ರತಿದಿನಿ 100 ಕಿ.ಮೀ ಸೈಕ್ಲಿಂಗ್ ಮಾಡಿ ಅನಿಲ್ ಕ್ರಿಯಾಶೀಲರಾಗಿದ್ದರು. 100 ಕ್ಕೂ ಹೆಚ್ಚು ಸೈಕ್ಲಿಂಗ್ನ್ನು ಪೂರ್ತಿಗೊಳಿಸಿದ್ದರು. ಸೈಕ್ಲಿಂಗ್ ಮಾಡುವವರಿಗೆ ಸ್ಫೂರ್ತಿಯಾಗಿದ್ದರು. 42 ತಿಂಗಳು ನಿರಂತರವಾಗಿ, ಸೆಂಚ್ಯೂರಿ ರೇಡ್ ಮಾಡಿ ಗಮನ ಸೆಳೆದಿದ್ದರು.
ಉತ್ತಮ ಹಾಗೂ ಕಠಿಣ ಸೈಕ್ಲಿಂಗ್ ಪಟುಗಳಾಗಲು ಸಲಹೆ ನೀಡುತ್ತಿದ್ದರು. ಸೈಕ್ಲಿಂಗ್ ಮಾಡುವ ಬಹುತೇಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದರು.