ಬೆಂಗಳೂರು :- 2024 ರ ಲೋಕಸಭಾ ಚುನಾವಣೆ ಪ್ರಯುಕ್ತ ಇಂದು ಕರ್ನಾಟಕದ 17 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಗಿದಿದೆ.
Rahul Gandhi: ಕರ್ನಾಟಕಕ್ಕೆ ಬಿಜೆಪಿ ಖಾಲಿ ಚೊಂಬು ಕೊಟ್ಟಿದೆ: ರಾಹುಲ್ ಗಾಂಧಿ ಕಿಡಿ
ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವ ವಿವರ ಇಲ್ಲಿದೆ.
ಸಿಲಿಕಾನ್ ಸಿಟಿ, ಸರ್ಕಾರದ ಖಜಾನೆ ತುಂಬಿಸೋ ನಗರಿ. ಐಟಿ ಬಿಟಿ ಕಂಪನಿಗಳ ನೆಲೆ.. ವಿದ್ಯಾವಂತರೇ ತುಂಬಿರೋ ಮಯಾನಗರಿ ಬೆಂಗಳೂರು.. ಆದ್ರೆ, ಬೆಂಗಳೂರಿನಲ್ಲಿ ಈ ಬಾರಿಯೂ ಮತದಾನ ಕಡಿಮೆಯಾಗಿದೆ. ಮನೆ ಬಿಟ್ಟು ಬಾರದವರು, ವೀಕೆಂಡ್ ಎಂದು ಊರು ಖಾಲಿ ಮಾಡಿದವರು ಮತಗಟ್ಟೆಯಿಂದ ದೂರ ಉಳಿದಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನ ಅಂದ್ರೆ, ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತಗಟ್ಟೆಗಳಲ್ಲಿ ಪ್ರತಿ ಗಂಟೆಗೆ ಐದು ಜನ ಮಾತ್ರ ಮತದಾನ ಮಾಡಿದ್ದು ಕಂಡು ಬಂತು.
ಯಾವ ಕ್ಷೇತ್ರದಲ್ಲಿ ಶೇಕಡವಾರು ಮತದಾನ ಎಷ್ಟಾಗಿದೆ?
ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ. ಇದರಲ್ಲಿ ಅತಿ ಕಡಿಮೆ ಬೆಂಗಳೂರು ಸೆಂಟ್ರಲ್ನಲ್ಲಿ 49 ಪರ್ಸೆಂಟ್ ವೋಟಿಂಗ್ ಆಗಿದೆ. ಬೆಂಗಳೂರು ಉತ್ತರದಲ್ಲಿ 51 ಪರ್ಸೆಂಟ್, ಬೆಂಗಳೂರು ಗ್ರಾಮಾಂತರದಲ್ಲಿ ಶೇಕಡಾ 61ರಷ್ಟು ಮತದಾನವಾಗಿದೆ. ಇನ್ನೂ ಬೆಂಗಳೂರು ದಕ್ಷಿಣದಲ್ಲಿ 49ರಷ್ಟು ವೋಟಿಂಗ್ ಆಗಿದೆ. ಚಾಮರಾಜನಗರದಲ್ಲಿ 69, ಚಿಕ್ಕಬಳ್ಳಾಪುರದಲ್ಲಿ 71, ಚಿತ್ರದುರ್ಗದಲ್ಲಿ 67, ದಕ್ಷಿಣ ಕನ್ನಡದಲ್ಲಿ 72, ಹಾಸನದಲ್ಲಿ 72, ಕೋಲಾರದಲ್ಲಿ 73ರಷ್ಟು ಮತದಾನವಾಗಿದೆ. ಇನ್ನೂಮಂಡ್ಯದಲ್ಲಿ ಅತಿ ಹೆಚ್ಚು ಅಂದ್ರೆ, 74.87ರಷ್ಟು ವೋಟಿಂಗ್ ಆಗಿದೆ. ಮೈಸೂರಲ್ಲಿ 66, ತುಮಕೂರು ಮತ್ತು ಚಿಕ್ಕಮಗಳೂರಲ್ಲಿ 72ರಷ್ಟು ಮತದಾನವಾಗಿದೆ.
ಇವಿಎಂಗಳಿಗೆ ಸೀಲ್
ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್ ಮುಚ್ಚಿದ್ದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್ಗೆ ರವಾನೆಯಾಗಿದ್ದು,ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ.
ಕೆಲವೆಡೆ ಬಹಿಷ್ಕಾರ
ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆಯಿತು.ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದ ಕಾರಣ ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಅವರಿಗೆ ಎದುರಾಯಿತು.
ಇನ್ನೂ ದೇಶಾದ್ಯಂತ ನಡೆದ ಎರಡನೇ ಹಂತದ ಮತದಾನದಲ್ಲಿ ತ್ರಿಪುರಾದಲ್ಲಿ 77ರಷ್ಟು ಮತದಾನವಾಗಿದೆ. ಮಣಿಪುರದಲ್ಲಿ 76, ಮಹಾರಾಷ್ಟ್ರದಲ್ಲಿ 53ರಷ್ಟು ವೋಟಿಂಗ್ ಆಗಿದೆ. ಇನ್ನೂ ಮಧ್ಯಪ್ರದೇಶದಲ್ಲಿ 55, ಉತ್ತರ ಪ್ರದೇಶದಲ್ಲಿ 52, ಪಶ್ಚಿಮ ಬಂಗಾಳದಲ್ಲಿ 71ರಷ್ಟು ಮತದಾನವಾಗಿದೆ ಎಂದು ಹೇಳಲಾಗಿದೆ.