ಇಸ್ರೇಲ್: ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ಅಧಿಕಾರಿಗಳು ಬುಧವಾರ 643 ಬಂಧಿತ ಪ್ಯಾಲೆಸ್ತೀನ್ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ ಎಂದು ಇಸ್ರೇಲ್ ನ ಜೈಲು ಸೇವಾ ವಿಭಾಗ ದೃಢಪಡಿಸಿದೆ.
ಜನವರಿ 19 ರಿಂದ ಪ್ಯಾಲಿಸ್ತೀನ್ ಒಟ್ಟು 33 ಇಸ್ರೇಲ್ನ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಇದಕ್ಕೆ ಬದಲಾಗಿ ಇಸ್ರೇಲ್, ಇದುವರೆಗೂ ಒಟ್ಟು 1,778 ಪ್ಯಾಲೆಸ್ತೇನಿಯನ್ನರನ್ನು ಬಿಡುಗಡೆ ಮಾಡಿದೆ ಎಂದಿದ್ದಾರೆ.
ಬುಧವಾರ ರಾತ್ರಿ ಪರಸ್ವರ ಒತ್ತೆಯಾಳುಗಳ ವಿನಿಮಯದ ಮೂಲಕ ಕದನ ವಿರಾಮ ಒಪ್ಪಂದದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಉಳಿದ 59 ಒತ್ತೆಯಾಳುಗಳ ಭವಿಷ್ಯವನ್ನು ಮಾತುಕತೆಯ ಮೂಲಕ ನಿರ್ಧರಿಸಲಾಗುತ್ತದೆ.
ಅಕ್ಟೋಬರ್ 7 ರಂದು ಗಾಜಾ ಗಡಿಯ ಸಮೀಪ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿ ಕನಿಷ್ಠ 1,200 ಜನರನ್ನು ಕೊಂದು ಹಾಕಿತ್ತು. ಅಷ್ಟೇ ಅಲ್ಲ 252 ಇಸ್ರೇಲಿಗಳು ಮತ್ತು ಕೆಲ ವಿದೇಶಿಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಪ್ಯಾಲಿಸ್ತೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ಪರಿಣಾಮ 40 ಸಾವಿರಕ್ಕೂ ಹೆಚ್ಚು ಪ್ಯಾಲಿಸ್ತೇನಿಯರು ಸಾವನ್ನಪ್ಪಿದ್ದಾರೆ.