ಶ್ರೀನಗರ: ಜಾಮೀನಿನ (Bail) ಮೇಲೆ ಬಿಡುಗಡೆಯಾದ ಶಂಕಿತ ಉಗ್ರರ ಮೇಲೆ ನಿಗಾ ಇಡಲು ಅವರ ಕಾಲಿಗೆ ಜಿಪಿಎಸ್ ಆಧಾರಿತ ಬಳೆಯನ್ನು (GPS Anklet) ಜಮ್ಮು ಕಾಶ್ಮೀರ ಪೊಲೀಸರು (Jammu Kashmir) ಪರಿಚಯಿಸಿದ್ದಾರೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿ ಬಂಧನಕ್ಕೆ ಒಳಗಾದ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ದೇಶದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಗೆ ಜಮ್ಮು ಕಾಶ್ಮೀರ ಪೊಲೀಸರು ಪಾತ್ರರಾಗಿದ್ದಾರೆ.
ಜಿಪಿಎಸ್ ಟ್ರ್ಯಾಕರ್ ಆಂಕ್ಲೆಟ್ ವ್ಯಕ್ತಿಯ ಪಾದದ ಸುತ್ತಲೂ ಧರಿಸಬಹುದಾದ ಸಾಧನವಾಗಿದ್ದು, ಮೇಲ್ವಿಚಾರಣೆ ಮಾಡಲು ಮತ್ತು ಅವರ ಚಲನೆಯನ್ನು ಟ್ರ್ಯಾಕ್ ಮಾಡುತ್ತದೆ. ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿರುವ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಜೈಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಈ ಸಾಧನವನ್ನು ಈಗಾಗಲೇ ಅಮೆರಿಕ, ಯುನೈಟೆಡ್ ಕಿಂಗ್ಡಮ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಬಳಸಲಾಗುತ್ತಿದೆ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಹಲವು ಉಗ್ರ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದ ಗುಲಾಂ ಮೊಹಮ್ಮದ್ ಭಟ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈತನ ಜಾಮೀನು ಅರ್ಜಿಯನ್ನು ಆಲಿಸಿದ ಜಮ್ಮು ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯ (NIA) ಪೊಲೀಸರಿಗೆ ಜಿಪಿಎಸ್ ಆಧಾರಿತ ಸಾಧನ ಅಳವಡಿಸಲು ಸೂಚಿಸಿ ಜಾಮೀನು ಮಂಜೂರು ಮಾಡಿತು. ಪ್ರಸ್ತುತ ಈ ಸಾಧನವನ್ನು ದೇಶದ್ರೋಹ ಪ್ರಕರಣದಡಿ ಬಂಧಿತರಾಗುವ ಆರೋಪಿಗಳಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ.