ಆನೇಕಲ್ ತಾಲೂಕಿನ ದೊಮ್ಮಸಂದ್ರ ಸಂತೆ ಬೀದಿಯಲ್ಲಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್ ನನ್ನ ನಡು ರಸ್ತೆಯಲ್ಲಿ ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು . ಈ ಕೊಲೆಯಿಂದಾಗಿ ಇಡೀ ಏರಿಯಾ ಬೆಚ್ಚಿಬಿದ್ದಿತ್ತು ಈ ಪ್ರಕರಣ ಸಂಬಂಧಪಟ್ಟಂತೆ ಇಂದು ಆರೋಪಿ ಕಾಲಿಗೆ ಬೆಳ್ಳಂ ಬೆಳಗ್ಗೆ ಪೊಲೀಸರು ಗುಂಡಿನ ರುಚಿ ತೋರಿದ್ದಾರೆ ಇದರಿಂದ ಆರೋಪಿಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ್ದಾರೆ ಅಷ್ಟಕ್ಕೂ ಈ ಸ್ಟೋರಿ ಏನಂತೀರಾ !?
ರಾತ್ರಿ 9:00 ಗಂಟೆ ಇನ್ನೇನು ಊಟ ಮಾಡಲು ಮನೆಗೆ ಹೋಗ್ತಿದ್ದ ಆ ಸಮಯದಲ್ಲಿ ಇಬ್ಬರು ಸ್ನೇಹಿತರು ಬಂದಿದ್ದರು ಅವರ ಜೊತೆಗೆ ಮಾತಾಡ್ತಿರುವಾಗಲೇ ಬೈಕ್ ನಲ್ಲಿ ಬಂದಿದ್ದ ಕದೀಮರ ಗ್ಯಾಂಗ್ ಏಕಾಏಕಿ ಮಚ್ಚಿನಿಂದ ಕೊಚ್ಚಿ, ಕೊಲೆ ಮಾಡಿದ್ರು .. ಕೊಲೆ ಮಾಡಿ ಕೆಕೆ ಹಾಕಿದ್ದರು. ಇದರಿಂದ ಇಡಿ ಏರಿಯಾ ಬೆಚ್ಚಿಬಿತ್ತಿತ್ತು. ಇನ್ನು ಕೊಲೆಯಾದ ಮೃತ ಹೆಸರು ವೆಂಕಟೇಶ ಅಂತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ದೊಮ್ಮಸಂದ್ರ ಸಂತೆ ಬೀದಿಯಲ್ಲಿ ಇದೆ ತಿಂಗಳು 29ನೇ ತಾರೀಕಿನಂದು ರೌಡಿಶೀಟರ್ ವೆಂಕಟೇಶ್ ನನ್ನ ಮನೆ ಸಮೀಪವೇ ಶ್ರೀನಿವಾಸ ಅಲಿಯಾಸ್ ಗುಬ್ಬಚ್ಚಿ ಗ್ಯಾಂಗ್ ಅಟ್ಯಾಕ್ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಇಂದು ಕೊಲೆ ಮಾಡಿದ ಆರೋಪಿಗೆ ಸರ್ಜಾಪುರ ಇನ್ಸ್ಪೆಕ್ಟರ್ ಕಾಲಿಗೆ ಗುಂಡೇಟು ಇಳಿಸಿದ್ದಾರೆ..
New recharge plan: ಈ ರೀಚಾರ್ಜ್ ಮಾಡಿದ್ರೆ ಒಂದು ವರ್ಷ ನೆಮ್ಮದಿ..! ಇದುವೇ ನೋಡಿ BSNLನ ಸೂಪರ್ ರೀಚಾರ್ಜ್ ಪ್ಲ್ಯಾನ್
ಇನ್ನು ಆರೋಪಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ 2007ರಲ್ಲಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ಜೇನಿನಿಂದಲೇ ಎರಡು ಕೊಲೆ ಮಾಡಿಸಿದ್ದ ಅದಾದ ಬಳಿಕ ಶಿಕ್ಷೆ ಅನುಭವಿಸಿ 2018 ರಲ್ಲಿ ಜೈಲಿನಿಂದ ಹೊರ ಬಂದಿದ್ದ ಅದಾದ ಬಳಿಕ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗ್ತಿದ್ದ.. ಆಗಲೇ ಕಾರ್ತಿಕ್ ಎಂಬಾತ ಪರಿಚಯ ಆಗಿದ್ದ ಪರಿಚಯ ನಂತರ ಕಾರ್ತಿಕ್ ಅಣ್ಣ ನಿಮ್ಮಿಂದ ನನಗೆ ಸಹಾಯ ಬೇಕು ನನಗೊಬ್ಬ ತುಂಬಾ ತೊಂದರೆ ಕೊಡುತ್ತಿದ್ದಾನೆ ಅವನನ್ನ ಮುಗಿಸಿ ಕೊಟ್ಟರೆ ನಿಮಗೆ 10 ಲಕ್ಷ ಕೊಡ್ತೀನಿ ಅಂತ ಸುಫಾರಿ ಕೊಟ್ಟಿದ್ದ..
ಇನ್ನು ಮೃತ ವೆಂಕಟೇಶ್ 2013ರಲ್ಲಿ ಕೊಲೆ ಮಾಡಿದ್ದ ಏರಿಯಾದಲ್ಲಿ ಅವಾಮೆಂಟೆನ್ ಮಾಡಿದ್ದ ವಿರೋಧಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದ ಇದೇ ಊರಿನ ಕಾರ್ತಿಕನ ಮೇಲೆಸಹ ಎರಡು ಬಾರಿ ಅಟ್ಯಾಕ್ ಮಾಡಿದ್ದ ಕಾರ್ತಿಕ್ ಸಹ ರಿಯಲ್ ಎಸ್ಟೇಟ್ ನಲ್ಲಿ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆಗಾಗ ಮೃತ ವೆಂಕಟೇಶ್ ಕಾರ್ತಿಕ್ ನ ಮುಗಿಸುವುದಾಗಿ ಬೆದರಿಕೆ ಸಹ ಹಾಕಿದ್ದ ಇದರಿಂದ ಬೆದರಿದ್ದ ಕಾರ್ತಿಕ್ ವೆಂಕಟೇಶ್ ನನ್ನ ಮುಗಿಸಲು ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸಹಾಯ ಕೇಳಿದ್ದ. ಸಹಾಯದಿಂದ 10 ಲಕ್ಷ ಸುಪಾರಿ ಕೊಟ್ಟು ವೆಂಕಟೇಶ್ ನ ರಕ್ತರಿಸಲು ಸ್ಕೆಚ್ಚು ಹಾಕಿದ್ದ ಈ ಒಂದು ಡೀಲ್ ಗೆ ಗುಬ್ಬಚ್ಚಿ ಸಹ ಕೈಜೋಡಿಸಿದ್ದ ..
ಇನ್ನು ಕೊಲೆ ಮಾಡುವ ಮುಂಚೆ ಮನೆ ಮುಂದೆ ನಿಂತಿದ್ದ ವೆಂಕಟೇಶ್ ನನ್ನ ಇಬ್ಬರು ಬೈಕ್ ನಲ್ಲಿ ಬಂದು ಅಬ್ಸರ್ವ್ ಮಾಡಿದ್ರು ಇನ್ನೊಂದು ವೇಗಿನಾರ್ ಕಾರ್ ನಲ್ಲಿ ಹೊಂಚು ಹಾಕಿದ್ರು ಮನೆ ಮುಂದೆ ನಿಂತಿದ್ದ ವೆಂಕಟೇಶ್ ನನ್ನ ಏಕಾಏಕಿ ಮಚ್ಚಿನಿಂದ ಕೊಚ್ಚಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಆರೋಪಿಗಳ ಪತ್ತೆಗಾಗಿ 4 ತಂಡಗಳನ್ನು ರಚನೆ ಮಾಡಲಾಗಿತ್ತು ಆರೋಪಿಯ ಪತ್ತೆಗಾಗಿ ಪೊಲೀಸರು ಬೆನ್ನು ಬಿದ್ದಿದ್ರು ಇಂದು ಬೆಳಗ್ಗೆ ಸರ್ಜಾಪುರ ದೊಮ್ಮಸಂದ್ರ ಸಮೀಪದ ಹೆಗ್ಗಂಡಳ್ಳಿ ನಿರ್ಜನ ಪ್ರದೇಶದಲ್ಲಿ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ರು
ಆರೋಪಿನ ಬಂದಿಸಲು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ ಆಗ ಆರೋಪಿಗೆ ಶರಣಾಗ್ವಂತೆ ಇನ್ಸ್ಪೆಕ್ಟರ್ ನವೀನ್ ಮನವಿ ಮಾಡಿದ್ರು ಆದ್ರೂ ಕಾನ್ಸ್ಟೇಬಲ್ ಇರ್ಫಾನ್ ಮೇಲೆ ಆರೋಪಿ ಹಲ್ಲೇ ಮಾಡಿ ಎಸ್ ಕೆ ಪಾಗಲು ಯತ್ನ ಮಾಡಿದ್ದ ಅಗ ಆತ್ಮ ರಕ್ಷಣೆಗಾಗಿ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಕಾಲಿಗೆ ಗುಂಡಾಯಿಸಿದ್ದಾರೆ ಗುಂಡೆಟ್ಟು ತಿಂದ ಆರೋಪಿಯನ್ನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಒಟ್ನಲ್ಲಿ ಭೂಗತ ಲೋಕದಲ್ಲಿ ಮಚ್ಚಿ ಹಿಡಿದವನು ಮಚ್ಚೆಯಿಂದಲೆ ಅಂತ್ಯ ಅನ್ನೋದು ಇದೊಂದು ನಿದರ್ಶನ .ಇನ್ನು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಇನ್ನು ಗುಂಡೇಟು ತಿಂದ ಆರೋಪಿಯ ತನಿಖೆ ನಂತರ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ..