ನವದೆಹಲಿ:- ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಅಪ್ರಾಪ್ತರಿಂದ ಫೈರಿಂಗ್ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ಮಪ್ಪಿ ಇಬ್ಬರು ಗಂಭೀರ ಗಾಯವಾಗಿದ್ದಾರೆ.
Prahlad Joshi: ವಕ್ಫ್ ಹಿಂಸೆಗೆ ಇನ್ನೆಷ್ಟು ಬಲಿ ಬೇಕು!? ಸಿದ್ದರಾಮಯ್ಯಗೆ ಜೋಶಿ ಪ್ರಶ್ನೆ!
ಈಶಾನ್ಯ ದೆಹಲಿಯ ಕಬೀರ್ ನಗರದಲ್ಲಿ ಘಟನೆ ಜರುಗಿದೆ. ನದೀಮ್ ಮತ್ತು ಆತನ ಇಬ್ಬರು ಸ್ನೇಹಿತರು ಊಟಕ್ಕೆ ಹೊರಟಿದ್ದರು ಈ ವೇಳೆ ಮೂವರು ಅಪ್ರಾಪ್ತರು ಬೈಕ್ನಲ್ಲಿ ಬಂದು 13 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನದೀಮ್ ಮತ್ತು ಆತನ ಸ್ನೇಹಿತರು ಗಂಭೀರ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ನದೀಮ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಸ್ನೇಹಿತರ ಸ್ಥಿತಿ ಗಂಭೀರವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರು ಅಪ್ರಾಪ್ತರಲ್ಲಿ ಒಬ್ಬ ನದೀಮ್ನಿಂದ ಸಾಲ ಪಡೆದಿದ್ದ. ಮರುಪಾವತಿಗೆ ಒತ್ತಡ ಹೇರಿದ್ದಕ್ಕೆ ಈ ಕೃತ್ಯ ಎಸಗಿದ್ದಾರೆ