ಶಿವಮೊಗ್ಗ : ಭದ್ರಾವತಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕಳೆದ ಫೆ.21ರಂದು ಹೊಸಮನೆ ಪೊಲೀಸ್ ಠಾಣೆಯ ಎಸ್ಐ ಕೃಷ್ಣ ಅವರು ಗುಂಡಾ ಅಲಿಯಾಸ್ ರವಿ ಎಂಬಾತನ ಮುಂಗಾಲಿಗೆ ಗುಂಡು ಹೊಡೆದಿದ್ದರು. ಇದೀಗ ಪೇಪರ್ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ನಾಗಮ್ಮ ಅವರು ಮತ್ತೊಬ್ಬ ರೌಡಿಶೀಟರ್ ಮೇಲೆ ಫೈರಿಂಗ್ ನಡೆಸಿದ್ದಾರೆ.
ಭದ್ರಾವತಿಯ ಪೇಪರ್ ಟೌನ್ ಪೊಲೀಸರು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣವೂ ಸೇರಿದಂತೆ 12 ಕೇಸ್ಗಳಲ್ಲಿ ಬೇಕಾಗಿರುವ ರೌಡಿಶೀಟರ್ ಶಾಹಿದ್ನ ಬಂಧನ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆತ ನಾಗರಾಜ್ ಎಂಬ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ. ಅಷ್ಟೊತ್ತಿಗೆ ಪಿಐ ನಾಗಮ್ಮ ಶಾಹಿದ್ ಕಾಲಿಗೆ ಗುಂಡು ಹಾರಿಸಿ ಆತನನ್ನ ನೆಲಕ್ಕೆ ಬೀಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪೇಪರ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ. ಈ ಬಗ್ಗೆ ಸ್ವತಃ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.