ಮಂಗಳೂರು: ವೇಣೂರು ಬಳಿ ಭೀಕರ ಸ್ಪೋಟ ಪ್ರಕರಣ ಸಂಬಂಧಿಸಿದಂತೆ ಆರೋಪಿ ಸಯ್ಯದ್ ಬಷೀರ್ನನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರಿನಿಂದ ಪರಾರಿಯಾಗುತ್ತಿದ್ದ ಬಶೀರ್ನನ್ನು ಪೊಲಿಸರು ಸುಳ್ಯದಲ್ಲಿ ಅರೆಸ್ಟ್ ಮಾಡಿದ್ದಾರೆ. ಸದ್ಯ ಬಶೀರ್ ಪೊಲೀಸರ ವಶದಲ್ಲಿದ್ದು, ಅಜ್ಞಾತ ಸ್ಥಳದಲ್ಲಿ ಆತನನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆ ಬಳಿಕ ನಿಜ ಸಂಗತಿ ಏನೆಂಬುದು ಬಯಲಾಗಲಿದೆ.
ಏನಿದು ಪಟಾಕಿ ಸ್ಫೋಟ ಪ್ರಕರಣ ?
ನಿನ್ನೆ ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಪಟಾಕಿ ತಯಾರಿಕ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿತ್ತು. ಐದು ಬಾರಿ ಸ್ಫೋಟ ಸಂಭವಿಸಿದ್ದರಿಂದ ಮೂವರು ಕಾರ್ಮಿಕರು ದುರ್ಮಣಕ್ಕೀಡಾಗಿದ್ದರು. ಆದ್ರೆ ಈ ಸ್ಫೋಟದ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು. ಹೀಗಾಗಿ ಪೊಲೀಸರು ಸಮಗ್ರ ತನಿಖೆಗೆ ಇಳಿದಿದ್ದರು, ಪಟಾಕಿ ತಯಾರಿಕ ಘಟಕದ ಮಾಲೀಕ ಸಯ್ಯದ್ ಬಶೀರ್ನನ್ನು ವಿಚಾರಣೆ ನಡೆಸಲು ಮುಂದಾದರು. ಆದರೆ ಬಶೀರ್ ಪರಾರಿಯಾಗುತ್ತಿದ್ದ ವಿಚಾರ ತಿಳಿದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
50 ಸೆಂಟ್ಸ್ ಜಾಗದಲ್ಲಿ ಪಟಾಕಿ ಉತ್ಪಾದನೆಗೆ ಲೈಸೆನ್ಸ್ ಪಡೆದಿದ್ದ ಬಶೀರ್
ಸೈಯದ್ ಬಶೀರ್ರ ತೋಟದಲ್ಲಿನ ಕಟ್ಟಡದಲ್ಲಿ ಪಟಾಕಿ ತಯಾರಿಕಾ ಘಟಕ ಇದೆ. ಸಾಲಿಡ್ ಫೈರ್ ವರ್ಕ್ ಪಟಾಕಿ ಫ್ಯಾಕ್ಟರಿ ಮಾಲೀಕರಾಗಿರುವ ಸೈಯದ್ ಬಶೀರ್, 50 ಸೆಂಟ್ಸ್ ಜಾಗದಲ್ಲಿ ಪಟಾಕಿ ಉತ್ಪಾದನೆಗೆ ಲೈಸೆನ್ಸ್ ಪಡೆದಿದ್ದರು. ಪಟಾಕಿ ಬೇಕು ಅಂತ ಆರ್ಡರ್ ಕೊಟ್ಟರೆ ಪಟಾಕಿ ಕೊಡುತ್ತಿದ್ದರು. 2011ರಲ್ಲಿ ಪರ್ಮೀಷನ್ ಪಡೆದುಕೊಂಡಿದ್ದು, 2018ರಲ್ಲಿ ರಿನಿವಲ್ ಮಾಡಿಸಲಾಗಿದೆ.
ಇನ್ನು 2024 ಮಾರ್ಚ್ ತನಕ ಲೈಸೆನ್ಸ್ ಅವಧಿ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಭಾನುವಾರ ಸಂಜೆ ಗೋಳಿಯಂಗಡಿಯಲ್ಲಿ ಆಕಸ್ಮಿಕವಾಗಿ ಪಟಾಕಿ ಸ್ಫೋಟ ಸಂಭವಿಸಿದೆ. ಒಟ್ಟು 5 ಬಾರಿ ಭಾರೀ ಸ್ಫೋಟ ಸಂಭವಿಸಿದ್ದು ಕೇರಳದ ಸ್ವಾಮಿ, ಕೇರಳದ ವರ್ಗಿಸ್, ಹಾಸನದ ಚೇತನ್ ಎಂಬ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮೂವರ ದೇಹಗಳು ಛಿದ್ರವಾಗಿ ಬಿದ್ದಿದ್ದು. ಇನ್ನು ಅಕ್ಕಪಕ್ಕದ ಮನೆಯ ಛಾವಣಿಯ ಶೀಟ್ಗಳು ಕೂಡ ಪೀಸ್ ಪೀಸ್ ಆಗಿದ್ದು, ಹಾನಿಗೊಳಗಾಗಿದೆ.