ಗೊಟ್ಟಿಗೆರೆ:- ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರಾಯಲ್ ಕೌಂಟಿಂ ಪಾರ್ಕ್ ಹಿಂಬಾಗದಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡ ಹಿನ್ನೆಲೆ ಸ್ಕ್ರಾಪ್ ಗೋಡೌನ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಜರುಗಿದೆ.
ಬೆಂಕಿಯ ಕೆನ್ನಾಲಿಗೆಗೆ ಗೋಡೌನ್ ನಲ್ಲಿದ್ದ ಸ್ಕ್ರಾಪ್ ಐಟಮ್ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಸ್ತಗಿರಿ ಎಂಬುವರಿಗೆ ಸೇರಿರುವ ಸ್ಕ್ರಾಪ್ ಗೋಡೌನ್ ಇದಾಗಿದ್ದು, ಕೂಡಲೇ ಅಗ್ನಿ ಶಾಮಕ ದಳ ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ.
ಅಗ್ನಿ ಶಾಮಕದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ.