ಗದಗ: ಶಾರ್ಟ ಸರ್ಕ್ಯೂಟ್ ಪರಿಣಾಮ ಅಂಗಡಿ ಮಳಿಗೆಗೆ ಬೆಂಕಿ ಹತ್ತಿಕೊಂಡ ಘಟನೆ ನೆನ್ನೆ ತಡರಾತ್ರಿ ಗದಗ ಜಿಲ್ಲೆ ನರಗುಂದ ಬಸ್ ನಿಲ್ದಾಣದಲ್ಲಿ ನಡೆದಿದೆ.
SBI ನಲ್ಲಿ 5 ಲಕ್ಷ ಸಾಲಬೇಕಾ! ? ಹಾಗಿದ್ರೆ ತಿಂಗಳ ಸಂಬಳ ಎಷ್ಟಿರಬೇಕು ಗೊತ್ತಾ!? ನೀವು ಅರ್ಹರಾ ನೋಡಿ!
ಬೆಂಕಿಯ ಕೆನ್ನಾಲಿಗೆ ಹೆಚ್ಚಿದ್ದ ಕಾರಣ ಕೆಲ ಗಂಟೆಗಳ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.