ಗದಗ : ರೈತರ ಹೊಟ್ಟು, ಮೇವಿನ ಬಣವೆಗಳು ಹಾಗೂ ಕೃಷಿ ಸಲಕರಣೆಗಳು ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಸುಮಾರು 40ಕ್ಕೂ ಅಧಿಕ ಹೊಟ್ಟು, ಮೇವಿನ ಬಣವಿಗಳು ಬೆಂಕಿಗಾಹುತಿಯಾಗಿವೆ. ಯಾರೋ ಕಿಡಿಗೇಡಿಗಳು ಬಣವಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗ್ತಿವೆ.
ಊರ ಹೊರವಲಯದ ಬಯಲು ಜಾಗದಲ್ಲಿ ಗ್ರಾಮದ ರೈತರು ಒಂದೇ ಕಡೆ 40ಕ್ಕೂ ಅಧಿಕ ಬಣವಿಗಳನ್ನು ಹಾಕಿದ್ರು. ಏಕಾಏಕಿ ಹತ್ತಾರು ಬಣವೆಗಳಿಗೆ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿನಂದಿಸಲು ಮುಂದಾದರು. ಅಗ್ನಿಶಾಮಕ ದಳ ಸಿಬ್ಬಂದಿ ತಡವಾಗಿ ಬಂದಿದ್ದಕ್ಕೆ, ರೈತರ ಆಕ್ರೋಶ ವ್ಯಕ್ತಪಡಿಸಿದರು. ರೈತರು ತಮ್ಮ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಬೇಸಿಗೆ ಸಂದರ್ಭದಲ್ಲಿ ಹೊಟ್ಟು, ಮೇವು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಕೇವಲ ಬಣವೆಗಳು ಅಷ್ಟೇ ಅಲ್ಲಾ ರೈತರ ಕೃಷಿ ಸಲಕರಣೆಗಳು ಸುಟ್ಟಿವೆ. ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು, ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.