ಮುಂಬೈ:- ನೂತನ ಶಾಸಕರ ವಿಜಯೋತ್ಸವ ವೇಳೆ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದ ಘಟನೆ ಜರುಗಿದೆ.
ಲವರ್ ಮೀಟ್ ಮಾಡೋಕೆ ಬಂದವ ಕಿಡ್ನ್ಯಾಪ್: ಪ್ರಿಯತಮೆಯಿಂದ್ಲೇ ನಡೀತು ಖತರ್ನಾಕ್ ಪ್ಲ್ಯಾನ್!
ಕೊಲ್ಲಾಪೂರ ಜಿಲ್ಲೆಯ ಮಹಗಾಂವ್ ಪಟ್ಟಣದಲ್ಲಿ ನಡೆದಿದೆ. ಚಂದಗಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಶಿವಾಜಿ ಪಾಟೀಲ್ ಅವರಿಗೆ ಅಭಿಮಾನಿಗಳು ಆರತಿ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಆರತಿ ಮಾಡುವ ಸಂದರ್ಭದಲ್ಲಿ ಜೆಸಿಬಿ ಮೂಲಕ ಗುಲಾಲವನ್ನು ಆರತಿ ಮೇಲೆ ಸುರಿಯಲಾಗಿದೆ. ಈ ವೇಳೆ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಹೊತ್ತಿದೆ. ಅವಘಡದಲ್ಲಿ ನೂತನ ಶಾಸಕ ಸೇರಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.