ಬೆಳಗಾವಿ:- ಇಲ್ಲಿನ ಸೋಮೇಶ್ವರ ಸಕ್ಕರೆ ಕಾರ್ಖಾನೆ ಹಿಂಬದಿಯ ಜಮೀನಿನಲ್ಲಿ ಹಾಕಲಾಗಿದ್ದ ಕಸಕ್ಕೆ ಬೆಂಕಿ ಹೊತ್ತಿದ ಘಟನೆ ಜರುಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕಾರ್ಖಾನೆ ಹಿಂಬದಿಯ ಜಮೀನಿನಲ್ಲಿ ಕಸಕ್ಕೆ ಬೆಂಕಿ ಬಿದ್ದಿದೆ. ವಿಪರೀತ ಗಾಳಿ ಇರುವ ಕಾರಣಕ್ಕೆ ಕಾರ್ಖಾನೆ ಒಳಗಿರುವ ಬಗ್ಯಾಸ್ ತುಂಬಾ ಬೆಂಕಿ ವ್ಯಾಪಿಸಿದೆ. ಕಬ್ಬು ನುರಿಸಿದ ಬಳಿಕ ಬರುವ ಸಿಪ್ಪಿಗೆ ಬೆಂಕಿ ತಗುಲಿದೆ. ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸಕ್ಕರೆ ಕಾರ್ಖಾನೆ ಒಳಗೂ ಬೆಂಕಿ ವ್ಯಾಪಿಸುವ ಆತಂಕದಲ್ಲಿ ಸಿಬ್ಬಂದಿ, ಕಾರ್ಮಿಕರು ಇದ್ದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.