ಬೆಂಗಳೂರು:- ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ದಾಖಲಾದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಮ್ಮು ಕಡಿಮೆ ಆಗ್ತಿಲ್ವಾ!? ಎಚ್ಚರ, ಇದು ಶ್ವಾಸಕೋಶದ ಕ್ಯಾನ್ಸರ್ ಲಕ್ಷಣ!
ಎಫ್ಐಆರ್ ದಾಖಲಾದ ಮೇಲೆ ರಾಜೀನಾಮೆ ನೀಡಬೇಕಲ್ವಾ? ಹಾಗೆ ರಾಜೀನಾಮೆ ನೀಡಿದರೆ ಇಡೀ ಬಿಜೆಪಿಯೇ ಖಾಲಿ ಆಗುತ್ತದೆ. 1 ಲಕ್ಷ ಕೋಟಿ ಲಾಸ್ನಲ್ಲಿರುವ 33 ಕಂಪನಿಗಳು 570 ಕೋಟಿ ರೂ. ಬಾಂಡ್ ಹಣ ನೀಡಿವೆ ಎಂದಿದ್ದಾರೆ.
ಪ್ರಹ್ಲಾದ್ ಜೋಶಿ ಅವರ ಹೇಳಿಕೆ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಜೋಶಿಯವರು ಯಾರನ್ನು ಮೆಚ್ಚಿಸುತ್ರಿದ್ದಾರೋ ಗೊತ್ತಿಲ್ಲ. ರಾಹುಲ್, ಸೋನಿಯಾ ಜೈಲಿಗೆ ಹಾಕಬೇಕು ಅಂತಾರೆ, 10 ವರ್ಷದಿಂದ ನೀವೇ ಅಧಿಕಾರದಲ್ಲಿ ಇದ್ದೀರಾ ಬೆರಳಿ ಚೀಪ್ತಾ ಇದ್ದೀರಾ? ಚಾಂದನಿ ಚೌಕ್ನಲ್ಲಿ ಬೇಲ್ ಪುರಿ ತಿನ್ನೋಕೆ ಹೋಗಿದ್ದೀರಾ? ಜೋಶಿಯವರೇ ಎಂದು ಲೇವಡಿ ಮಾಡಿದ್ದಾರೆ.
ವಿಜಯೇಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್ ಇದೆ. ಅದನ್ನು ಜೋಶಿ ಮರೆತಿದ್ದಾರಾ..? ಅತ್ಯಂತ ಇನಕಾಂಪಿಟೆಂಟ್ ಗೃಹ ಸಚಿವರು ಅಂದ್ರೆ ಅದು ಅಮಿತ್ ಶಾ, 10 ವರ್ಷದಿಂದ ಏನ್ ಮಾಡ್ತಿದ್ರಿ? ವಿಜಯೇಂದ್ರ ಜೈಲಿಗೆ ಹೋಗ್ತಾರೆ ಅಂತ ನಿಮ್ಮದೇ ಶಾಸಕರು ಹೇಳ್ತಾರೆ. ಎಷ್ಟು ಬಾರಿ ಮಾರಿಷಸ್ ದುಬೈಗೆ ಹೋಗಿದ್ದಾರೆ? ಅಂತ ನಿಮ್ಮ ಪಾಸಪೋರ್ಟ್ ತೋರಿಸಿ. ನರಿಗಳು ನ್ಯಾಯ ಹೇಳೋದೂ ಒಂದೇ ಬಿಜೆಪಿಯವರು ನ್ಯಾಯ ಹೇಳೋದೂ ಒಂದೇ. ಬಿಜೆಪಿಯ 23 ಕೇಂದ್ರ ಸಚಿವರ ಮೇಲೆ ಎಫ್ಐಆರ್ ಆಗಿದೆ. ಆರ್.ಅಶೋಕ್ ಭೂಕಬಳಿಕೆ ಪ್ರಕರಣದಲ್ಲಿ ಎ1, ಇದರಲ್ಲಿ ಪೂಜ್ಯ ಅಪ್ಪಾಜಿಯವರಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಪೋಕ್ಸೋ ಕೇಸ್ನಲ್ಲಿ ಯಡಿಯೂರಪ್ಪ ಅವರ ಹೆಸರು ಬಂದಾಗ ಜೋಶಿಯವರು ಯಾಕೆ ಸುಮ್ಮನಾದ್ರಿ? ಬಿಜೆಪಿಯಲ್ಲಿ ಒಂದಿಬ್ಬರು ನೈತಿಕತೆ ಇರುವವರಿದ್ದಾರೆ. ಯಡಿಯೂರಪ್ಪಗೆ ನಾಚಿಕೆ ಇದ್ರೆ ಅವರು ಸ್ಟೇಜ್ಗೆ ಹತ್ತಬಾರದು ಅಂತ ಕೆಲವರು ಹೇಳಿದ್ದಾರೆ. ಅದನ್ನು ಹೇಳಿದಾಗ ಯಾವ ಬಿಜೆಪಿ ನಾಯಕರೂ ಮಾತಾಡಲ್ಲ. ಮುನಿರತ್ನ ವಿಷಯ ಬಂದಾಗ ಜೋಶಿ ಸಾಹೇಬ್ರು ಮಾತೇ ಆಡಲ್ಲ. ಮುನಿರತ್ನ ವಿಚಾರವನ್ನು ಸಮರ್ಥನೆ ಮಾಡಿಕೊಂಡ್ರಲ್ಲ ನಾಚಿಕೆ ಆಗಲ್ವಾ? ಎಂದು ಕುಟುಕಿದ್ದಾರೆ.