ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿಯ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಕ್ರೀಸ್ಗೆ ಬರುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಕ್ರೀಡಾಂಗಣದ ಗ್ರಿಲ್ ಹಾರಿ ಕ್ರೀಸ್ ಬಳಿ ಬಂದು ಕೊಹ್ಲಿಯ ಕಾಲು ಹಿಡಿದಿದ್ದ! ತಕ್ಷಣ ಆತನನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿದ್ದರು.
ಇದೀಗ ಆ ವ್ಯಕ್ತಿ ಯಾರು? ಆತ ಕ್ರಿಕೆಟ್ ಪಂದ್ಯ ವೀಕ್ಷಣೆಗೆ ಬಂದಿದ್ದು ಹೇಗೆ, ಆತನ ಉದ್ದೇಶ ಏನಿತ್ತು ಎಂಬ ಎಲ್ಲ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಲ್ಲದೆ, ಆತನ ವಿರುದ್ಧ FIR ದಾಖಲಿಸಿದ್ದಾರೆ.
RCB ಪಂದ್ಯ ಗೆದ್ದ ಕೂಡಲೇ ಪತ್ನಿಗೆ ಕಾಲ್ ಮಾಡಿ ಸಂಭ್ರಮಿಸಿದ ವಿರಾಟ್ ಕೊಹ್ಲಿ: VIdeo Viral!
ಸ್ಟೇಡಿಯಂ ನಲ್ಲಿ ವ್ಯಕ್ತಿ ನುಗ್ಗಿದ್ದ ವಿಚಾರ ಸಂಬಂದಿಸಿದಂತೆ ಸ್ಕ್ರೀಜ್ ಗೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದಿದ್ದವನ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ರಾಯಚೂರು ಮೂಲದ ಕುರುಮಪ್ಪ @ ಚಿನ್ನ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ
ಈತ ರಾಯಚೂರಿನಿಂದ ಬಂದಿದ್ದ ಅಪ್ರಾಪ್ತ ಎಂಬುದು ತಿಳಿದುಬಂದಿದೆ. ರೈಲಿನಲ್ಲಿ ರಾಯಚೂರಿನಿಂದ ಬಂದಿದ್ದ 17 ವರ್ಷದ ಅಪ್ರಾಪ್ತ, 3000 ರೂಪಾಯಿ ಕೊಟ್ಟು ಡಿ ಬ್ಲಾಕ್ ಟಿಕೆಟ್ ಖರೀದಿ ಮಾಡಿದ್ದ. ಈತ ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದಾನೆ
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿಬಿ VS ಪಂಜಾಬ್ ಪಂದ್ಯ ನಡೀತಿತ್ತು.. ಈ ವೇಳೆ ಏಕಾ ಏಕಿ ಗ್ರೌಂಡ್ ಒಳಗೆ ಜಂಪ್ ಮಾಡಿ ಸ್ಕ್ರೀಜ್ ಗೆ ನುಗ್ಗಿ ಕೊಹ್ಲಿ ಕಾಲಿಗೆ ಬಿದ್ದು ನಮಸ್ಕರಿಸಿದ್ದ ಕುರುಮಪ್ಪ..
ಈ ವೇಳೆ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ವಿಚಾರಣೆ ವೇಳೆ ತನ್ನ ಹೆಸರು ರಂಜಿತ್ ಅಂತಾ ಹೇಳಿದ್ದ ಪೊಲೀಸರು ಕ್ರಾಸ್ ವೆರಿಫಿಕೇಷನ್ ಮಾಡಿದಾಗ ಆತನ ಮೂಲ ಹೆಸರು ಪತ್ತೆ ರಾಯಚೂರು ಮೂಲದ ಕುರುಮಪ್ಪ ಅನ್ನೋದು ಪತ್ತೆ..
ಸದ್ಯ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.