ಬೆಂಗಳೂರು : ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರ ಮಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು ನಕಲಿ ದಾಖಲೆಗಳ ಸೃಷ್ಟಿಸಿದ ಆರೋಪದಲ್ಲಿ ತನಿಖೆಗೆ ಕೋರ್ಟ್ ಆದೇಶ ನೀಡಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆಗೆ ವಿಲ್ಸನ್ ಗಾರ್ಡನ್ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಹೌದು.. ಕಾರಣವೆನೆಂದರೆ ಕೊರ್ಟ್ ಬದಲಾವಣೆಗಾಗಿ ನಕಲಿ ವಿಳಾಸದ ದಾಖಲೆ ಸೃಷ್ಟಿಸಿದ ಆರೋಪ ಹಾಗೆ ವಿಚ್ಚೇದನ ಕೋರಿದ್ದ ಅರ್ಜಿಯಲ್ಲಿ ದೀಪಾಲಿ ಲಿಂಗಾಡೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದ್ದು ಹೀಗಾಗಿ ಪತ್ನಿ ದೀಪಾಲಿ ವಿರುದ್ಧವೇ ಕೋರ್ಟ್ಗೆ ದೂರು ನೀಡಿದ್ದ ಪತಿ ಸಂದೀಪ್ ಲಿಂಗಾಡೆ
ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದ ಪೊಲೀಸರ ಮೇಲೆಯೂ ಒತ್ತಡ ಹಾಕಲಾಗಿದ್ದು ಪೊಲೀಸರು ಸಲ್ಲಿಸಿದ್ದ ಬಿ.ರಿಪೋರ್ಟ್ ನಿರಾಕರಿಸಿ ಮರುತನಿಖೆಗೆ ಆದೇಶ ಮಾಡಿದ ಕೋರ್ಟ್ ಹಾಗೆ ಪೊಲೀಸರ ಮೇಲೆ ಒತ್ತಡ ಹಾಕಲಾಗಿದೆ ಎಂದು ಸಂದೀಪ್ ಲಿಂಗಾಡೆ ಆರೋಪ ಮಾಡಿದ್ದಾರೆ.
ವಿಚ್ಚೇದನ ಕೋರಿದ್ದ ಅರ್ಜಿಯಲ್ಲಿ ಹೆಚ್ಚು ಜೀವನಾಂಶ ಪಡೆಯಲು ನಕಲಿ ದಾಖಲೆ ಸೃಷ್ಟಿ ಮಾಡಲಾಗಿದ್ದು ಬಿಸಿನೆಸ್ ಮೆನ್ ಆಗಿರುವ ಸಂದೀಪ್ ಲಿಂಗಾಡೆಯಿಂದ ಜೀವನಾಂಶಕ್ಕಾಗಿ ದೀಪಾಲಿ ಷಡ್ಯಂತ್ರ ಮಾಡಲಾಗಿದೆ ಎನ್ನಲಾಗುತ್ತಿದ್ದು ದಾಖಲೆಗಳನ್ನ ಸಂಗ್ರಹಿಸಿ ಪತ್ನಿಯ ಸುಳ್ಳು ದಾಖಲೆಗಳ ವಿರುದ್ಧ ಸಂದೀಪ್ ಈಗ ಹೋರಾಟ ನಡೆಸುತ್ತಿದ್ದಾರೆ