ಭಾರತೀಯ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ರೆಮೊ ಹಾಗೂ ಹೆಂಡ್ತಿ ವಿರುದ್ಧ FIR ದಾಖಲಾಗಿದೆ. 11 ಕೋಟಿ ವಂಚನೆ ಮಾಡಿರುವ ಆರೋಪದಡಿ ನಿರ್ದೇಶಕ, ಕೊರಿಯೋಗ್ರಾಫರ್ ರೆಮೊ ಹಾಗೂ ಪತ್ನಿ ವಿರುದ್ಧ ಡ್ಯಾನ್ಸ್ ಗ್ರೂಫ್ನ ಮುಖ್ಯಸ್ಥರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.
IND vs NZ: ಅಂಪೈರ್ಸ್ ವಿರುದ್ಧ ಸಿಡಿಮಿಡಿಗೊಂಡ ಕೊಹ್ಲಿ, ರೋಹಿತ್: ರೊಚ್ಚಿಗೆದ್ದಿದ್ದೇಕೆ ಟೀಂ ಇಂಡಿಯಾ ಆಟಗಾರರು!
ದಾಖಲಾಗಿರುವ ಎಫ್ಐಆರ್ನಂತೆ, ರೆಮೊ ಡಿಸೋಜಾ ಅವರ ಪತ್ನಿ ಲೀಜೆಲ್ಲಾ, ಓಂ ಪ್ರಕಾಶ್ ಶಂಕರ್ ಚೌಹಾಣ್, ರೋಹಿತ್ ಜಾಧವ್, ಫ್ರೇಂ ಪ್ರೊಡಕ್ಷನ್ ಕಂಪೆನಿ, ವಿನೋದ್ ರಾವತ್, ರಮೇಶ್ ಗುಪ್ತಾ ಮತ್ತು ಒಬ್ಬ ಪೊಲೀಸ್ ಅಧಿಕಾರಿಯ ವಿರುದ್ಧ ಸಹ ಯುವಕ ದೂರು ದಾಖಲಿಸಿದ್ದಾನೆ. 2018 ರಿಂದ 2024ರ ವರೆಗೆ ಡ್ಯಾನ್ಸ್ ಗ್ರೂಫ್ ಒಂದಕ್ಕೆ ಈ ಏಳು ಮಂದಿ ಮೋಸ ಮಾಡಿದ್ದು, ಇಲ್ಲಿಯವರೆಗೆ 11.96 ಕೋಟಿ ರೂಪಾಯಿ ಹಣ ವಂಚನೆ ಮಾಡಲಾಗಿದೆಯಂತೆ. ಆರೋಪಿಗಳ ಮೇಲೆ ಸೆಕ್ಷನ್ 465, 420 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.
ದಾಖಲಾಗಿರುವ ದೂರಿನಂತೆ, ಈಗ ದೂರು ನೀಡಿರುವ ಯುವಕನದ್ದು ಡ್ಯಾನ್ಸ್ ಗ್ರೂಫ್ ಇದ್ದು, 2018 ರಿಂದ 2024 ರವರೆಗೆ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಇತರೆ ಡ್ಯಾನ್ಸ್ ಕಾಂಪಿಟೇಶನ್ಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಗೆದ್ದಿದ್ದು, ರೆಮೊ ಡಿಸೋಜಾ ಹಾಗೂ ಇತರರು ಈ ಡ್ಯಾನ್ಸ್ ಗ್ರೂಪ್ ತಮ್ಮದೆಂದು ಸುಳ್ಳು ಹೇಳಿ ನಕಲಿ ಚಿತ್ರ, ದಾಖಲೆಗಳನ್ನು ಬಳಸಿ ಗೆದ್ದ ಹಣವನ್ನೆಲ್ಲ ಅವರೇ ಇಟ್ಟುಕೊಂಡಿದ್ದಾರಂತೆ. ಡ್ಯಾನ್ಸ್ ಗ್ರೂಪ್ಗೆ ಸೇರಬೇಕಾದ ಹಣ ಕೇಳಿದಾಗ ಬೆದರಿಕೆ ಸಹ ಹಾಕಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.