ಬೆಂಗಳೂರು:-ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಶಾಂತಕುಮಾರ್ ಮತ್ತು ಅವರ ಕುಟುಂಬಸ್ಥರ ವಿರುದ್ಧ FIR ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ ಆರೋಪ ಸಂಬಂಧ ವಿದ್ಯಾ ಅವರು ನೀಡಿದ ದೂರಿನ ಅನ್ವಯ FIR ದಾಖಲಾಗಿದೆ. ಡಿವೈಎಸ್ಪಿ ಶಾಂತಕುಮಾರ್, ಪತ್ನಿ ಲಕ್ಷ್ಮಿಕಾಂತ, ಮಕ್ಕಳಾದ ಮಹೇಶ್ ಹಾಗೂ ಸಾಯಿಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾವೇರಿ ಪೊಲೀಸ್ ಸಂಕೀರ್ಣದಲ್ಲಿ ವಾಸವಿರುವ ವಿದ್ಯಾ ಅವರು ಜನವರಿ 7 ರಂದು ಬೆಳಗ್ಗೆ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದ ವೇಳೆ ಆವರಣದಲ್ಲಿ ತೆಂಗಿನ ಕಾಯಿ, ನಿಂಬೆ ಹಣ್ಣು, ಬೂದು ಕುಂಬಳಕಾಯಿ ಒಡೆದು ಹಾಕಲಾಗಿತ್ತು.
ಇದನ್ನು ನೋಡಿದ ವಿದ್ಯಾ ಅವರು ಕಸ ಗುಡಿಸುವವರ ಬಳಿ ಕ್ಲೀನ್ ಮಾಡುವಂತೆ ಹೇಳಿದಾಗ ಲಕ್ಷ್ಮಿಕಾಂತ ಅವರು ವಿನಾಕಾರಣ ಜಗಳ ತೆಗೆದಿದ್ದಾರೆ. ಈ ವೇಳೆ ಪತ್ನಿಯ ಸಹಾಯಕ್ಕೆ ಶಾಂತಕುಮಾರ್ ಹಾಗೂ ಮಕ್ಕಳು ಆಗಮಿಸಿದ್ದಾರೆ. ಬಳಿಕ ವಿದ್ಯಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.