ಎಜ್ಯುಟೆಕ್ ಪ್ರಮುಖ ಕಂಪನಿ ಬೈಜೂಸ್ ಜಾಗತಿಕ ರಾಯಭಾರಿಯಾಗಿದ್ದ ಫುಟ್ಬಾಲ್(Football) ತಾರೆ ಲಿನೋನೆಲ್ ಮೆಸ್ಸಿ ಜತೆಗಿನ ಜಾಹೀರಾತು ಒಪ್ಪಂದಕ್ಕೆ ಬ್ರೇಕ್ ಆಗಿದೆ. ಹೌದು ಆಂತರಿಕ ಸಂಘರ್ಷ ಮತ್ತು ಹಣಕಾಸು ಬಿಕ್ಕಟ್ಟಿನಿಂದ ದೇಶವಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿರುವ ಎಜು ಟೆಕ್ ಸಂಸ್ಥೆ ‘ಬೈಜೂಸ್’ ಅರ್ಜೆಂಟೀನಾ ಮೂಲದ ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆ ಲಯೊನೆಲ್ ಮೆಸ್ಸಿ ಜತೆಗಿನ ಜಾಹೀರಾತು ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ.
ಈ ಹಿಂದೆ ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಯೊನೆಲ್ ಮೆಸ್ಸಿಯವರನ್ನು ಬೈಜೂಸ್ನ ಜಾಗತಿಕ ರಾಯಭಾರಿಯನ್ನಾಗಿ ನೇಮಿಸಿತ್ತು. ಈ ಸಂಬಂಧ ಸಂಸ್ಥೆ ಅವರೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಮೂರು ವರ್ಷಗಳ ಅವಧಿಯ ಈ ಒಪ್ಪಂದ 58 ಕೋಟಿ ರೂ. ಮೌಲ್ಯವನ್ನು ಹೊಂದಿದೆ. ಈ ಸಂಬಂಧ ಮೊದಲ ವರ್ಷ ಹಣವನ್ನು ಬೈಜೂಸ್ ಲಯೊನೆಲ್ ಮೆಸ್ಸಿಗೆ ಪಾವತಿಸಿತ್ತು. ಬೈಜೂಸ್ ಪರವಾಗಿ ಲಯೊನೆಲ್ ಮೆಸ್ಸಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಕೆಲಕಾಲ ಪ್ರಚಾರವನ್ನೂ ನಡೆಸಿದ್ದರು.
Raw Milk: ನಿಮಗೆ ಗೊತ್ತೇ.? ಹಸಿ ಹಾಲು ಕುಡಿಯುವುದು ಆರೋಗ್ಯಕ್ಕೆ ಸಖತ್ ಡೇಂಜರ್..!
ಆದರೆ ಈಗ ಎಜು ಟೆಕ್ ಸಂಸ್ಥೆ ಸಂಕಷ್ಟದಲ್ಲಿ ಇರುವುದರಿಂದ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಬಿಕ್ಕಟ್ಟಿನ ನಡುವೆಯೂ ಬೈಜೂಸ್ ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪ್ರಾಯೋಜಕತ್ವ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
”ಉದ್ಯೋಗಿಗಳಿಗೆ ಸಂಬಳ ನೀಡಲು ಹಣವಿಲ್ಲದಿದ್ದ ಮೇಲೆ ಜಾಹೀರಾತು ಅಭಿಯಾನಗಳಿಗೆ ವೆಚ್ಚ ಮಾಡುವ ಅವಶ್ಯಕತೆಯಿಲ್ಲ,” ಎಂದು ಎಕ್ಸ್ ಬಳಕೆದಾರರು ಈ ಬೆಳವಣಿಗೆ ಕುರಿತಾಗಿ ಅಭಿಪ್ರಾಯ ಹೊರಹಾಕಿದ್ದಾರೆ. ಇದೇ ವೇಳೆ ಬೈಜೂಸ್ ಜನವರಿ ತಿಂಗಳ ನೌಕರರ ಸಂಬಳವನ್ನು ಸಂದಾಯ ಮಾಡಿದೆ. ಅದರ ಹಿಂದೆಯೇ ಸ್ಥಾಪಕ ಬೈಜು ರವೀಂದ್ರನ್ ತಮ್ಮ ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್ನಲ್ಲಿ ತಾವು ಬೆಟ್ಟವನ್ನೇ ಹೊತ್ತು ಹಾಕಿ ಉದ್ಯೋಗಿಗಳ ಸಂಬಳ ನೀಡಿರುವುದಾಗಿ ಬರೆದುಕೊಂಡಿದ್ದಾರೆ.