ಕಲಘಟಗಿ (ಧಾರವಾಡ) : ಪಟ್ಟಣದ ಹುಲಿಗಿನಕಟ್ಟಿ ತಾಂಡಾದ ಶ್ರೀ ಪಾಂಡುರಂಗ ರುಕ್ಮಿಣಿ ಹರಿ ಮಂದಿರದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ 50,000 ರೂಪಾಯಿ ಚಕ್ ನ್ನ ಮಂದಿರ ಕಮಿಟಿಯವರಿಗೆ ಹಸ್ತಾಂತರಿಸಲಾಯಿತು.
ಬೆಂಗಳೂರಿಗರಿಗೆ ತಪ್ಪದ ಪವರ್ ಸಮಸ್ಯೆ: ಈ ಪ್ರದೇಶಗಳಲ್ಲಿ ಭಾನುವಾರ ಕರೆಂಟ್ ಇರಲ್ಲ! ಎಲ್ಲೆಲ್ಲಿ ಗೊತ್ತಾ?
ಈ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ್ ಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಧಾರ್ಮಿಕ ಪರಂಪರೆ ಉತ್ಸವ ಆಚರಿಸಲು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆ ಹಿರಿಯರ ಗೌರವ ಮಾರ್ಗದರ್ಶನ ಅವರು ಹಾಕಿಕೊಟ್ಟ ಸನ್ಮಾರ್ಗ ಅವಶ್ಯವಾಗಿದೆ ಹಾಗೂ ತಾಲೂಕಿನಲ್ಲಿ ಪ್ರತಿಯೊಂದು ದೇವಸ್ಥಾನಗಳು ಜೀರ್ಣೋದ್ಧಾರ ಆಗುತ್ತಿರುವುದು ಗ್ರಾಮದ ಸಮಸ್ತ ಗುರು ಹಿರಿಯರ ಪಾತ್ರ ಅಪಾರವಾಗಿದೆ ಎಂದರು.
ಯೋಚನಾಧಿಕಾರಿ ಪ್ರಶಾಂತ್ ನಾಯಕ, ದೇವಸ್ಥಾನದ ಕಮಿಟಿಯ ಅಧ್ಯಕ್ಷ ಮಾರುತಿ ಲಮಾಣಿ ಪಾಂಡು ರಾಥೋಡ್, ವಾಸು ಲಮಾಣಿ, ಚಂದಪ್ಪ ಲಮಾಣಿ, ಮಲ್ಲೇಶ್ ಕುಣಿಸಾಗರ್, ಸರಸ್ವತಿ ರಾಥೋಡ್, ಸಂಗೀತ ಪರವಣ್ಣವರ, ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.