ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಶ್ವಪ್ರಸಿದ್ದಿಯಾಗಿದೆ. ಕಳೆದ ಬಾರಿ ಮಳೆಯ ಅಭಾವದಿಂದಾಗಿ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಪರಿಣಾಮ 400 ಕೆರೆಗಳ ಪೈಕಿ ಬಹುತೇಕ ಕೆರೆಗಳು ಖಾಲಿಯಾಗಿದ್ದವು. ಆದರೆ ಈ ಬಾರಿ ಬೇಸಿಗೆಯಲ್ಲಿ ನೀರಿನ ಅಭಾವ ಪ್ರಾಣಿಗಳ ಕಾಡದು.
ಹೌದು, ಈ ಬಾರಿ ಹಿಂಗಾರು ಮಳೆ ಉತ್ತಮವಾದ ಹಿನ್ನಲೆ ಬಹುತೇಕ ಕೆರೆಗಳು ಭರ್ತಿಯಾಗಿವೆ. ಅಲ್ಲದೇ ಸೋಲಾರ್ ಪಂಪ್ ಮೂಲಕ ಸದಾ ಕೆರೆಗಳಿಗೆ ನೀರು ತುಂಬಿಸುತ್ತಿರುವ ಕಾರಣ ಕೆರೆಗಳಲ್ಲಿ ನೀರು ಶೇಖರಣೆಯಾಗಿಇದೆ. ಹೀಗಾಗಿ ಈ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಕೊರತೆ ಆಗದು
ಬೇರೆ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರಿನ ಕೊರತೆ ಇದೆ. ಆದರೆ ಬಂಡೀಪುರದಲ್ಲಿ ಶೇಖಡ 70 ರಷ್ಟು ಕರೆಗಳು ಭರ್ತಿಯಾಗಿವೆ. ಸೋಲಾರ್ ಪಂಪ್ ಮೂಲಕ ಕೆರೆಗಳಲ್ಲಿ ಭರ್ತಿಯಾಗಿದ್ದು, ಸಮೀಪವೆ ಆನೆಗಳ ಕಾಡೆಮ್ಮೆ, ಹುಲಿ, ಜಿಂಕೆಗಳ ಹಿಂಡು ಓಡಾಡುತ್ತಿವೆ.