‘ಬೀರ್ ಬೈಸೆಪ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿ ಘಳಿಸಿರುವ ರಣವೀರ್ ಅಲಾಹಾಬಾದಿಯಾ ಹಲವು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದಾರೆ. ಬೀರ್ ಬೈಸೆಪ್ಸ್ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ 82 ಲಕ್ಷ ಸಬ್ಸ್ಕ್ರೈಬರ್ಹೊಂದಿದ್ದಾಋಎ. ಇತ್ತೀಚೆಗೆ ಅವರು ಸಮಯ್ ರೈನಾ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ.
ಸಮಯ್ ರೈನಾ ಕೂಡ ಯೂಟ್ಯೂಬರ್. ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ಅವರು ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದಾರೆ. ಈ ಶೋನಲ್ಲಿ ಫಿಲ್ಟರ್ ಇಲ್ಲದೆ ಮಾತನಾಡಲಾಗುತ್ತದೆ. ಈ ಶೋಗೆ ಬಂದಿದ್ದ ರಣವೀರ್ ಅವರು ಎಲ್ಲೆ ಮೀರಿ ಮಾತನಾಡಿದ್ದರು. ಹೀಗಾಗಿ, ಸಮಯ್ ರೈನಾ, ಅಪೂರ್ವಾ ಮಖಿಜಾ, ರಣವೀರ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಾಗಿದೆ.
ಇದೇ ರೀತಿಯ ಆರೋಪಗಳಿಗೆ ಪ್ರಭಾವಿಗಳಾದ ಆಶಿಶ್ ಚಾಂಚ್ಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ಅವರ ಹೆಸರನ್ನೂ ಎಫ್ಐಆರ್ ನಲ್ಲಿ ಸೇರಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು X ನಲ್ಲಿ ದೃಢಪಡಿಸಿದ್ದಾರೆ. ಈ ಹಿಂದೆ, ಶೋನಲ್ಲಿ ಅಲ್ಲಾಬಾದಿಯಾ ಅವರ ಹೇಳಿಕೆಗಳ ಕುರಿತು ದೂರು ದಾಖಲಾದ ನಂತರ, ಮುಂಬೈ ಪೊಲೀಸರು ಖಾರ್ನಲ್ಲಿರುವ ಶೋನ ಸೆಟ್ಗೆ ಭೇಟಿ ನೀಡಿದ್ದರು.
ಮುಂಬೈ ಆಯುಕ್ತರು ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ರಣ್ವೀರ್ ಅಲ್ಲಾಬಾದಿಯಾ ಮತ್ತು ಇತರರು ಯೂಟ್ಯೂಬ್ ಶೋ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ನಲ್ಲಿ ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಾಷೆಯ ಸಂದರ್ಭದಲ್ಲಿ ಮಾಡಿದ ಈ ಹೇಳಿಕೆಗಳು ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಎಂದು ಪರಿಗಣಿಸಲಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸಾರದ ಮೂಲಕ ಜನಪ್ರಿಯತೆ ಮತ್ತು ಆರ್ಥಿಕ ಲಾಭ ಗಳಿಸಲು ಭಾಗವಹಿಸುವವರು ಉದ್ದೇಶಪೂರ್ವಕವಾಗಿ ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಣ್ವೀರ್ ಅಲ್ಲಾಬಾದಿಯಾ ಸೋಮವಾರ ಇನ್ಸ್ಟಾಗ್ರಾಮ್ನಲ್ಲಿ ಕ್ಷಮೆ ಯಾಚಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದ ಶೀರ್ಷಿಕೆಯಲ್ಲಿ “ನಾನು ಹೇಳಿದ್ದು ಸರಿಯಿಲ್ಲ. ನನಗೆ ತುಂಬಾ ಬೇಸರವಾಗಿದೆ” ಎಂದು ಬರೆದಿದ್ದಾರೆ. ವಿಡಿಯೋದಲ್ಲಿ ರಣ್ವೀರ್ “ನನ್ನ ಹೇಳಿಕೆ ಸರಿಯಿಲ್ಲ, ತಮಾಷೆಯೂ ಅಲ್ಲ. ಹಾಸ್ಯ ನನ್ನ ಚೆನ್ನಾಗಿ ಬರಲ್ಲ. ನಾನು ಇಲ್ಲಿ ಕ್ಷಮೆ ಕೇಳಲು ಬಂದಿದ್ದೇನೆ” ಎಂದು ಹೇಳಿದ್ದಾರೆ.