ಬಿಗ್ ಬಾಸ್ 10ರ ರನರ್ ಅಪ್ ಡ್ರೋಣ್ ಪ್ರತಾಪ್ ಮತ್ತೆ ಸಂಕಷ್ಟುಕ್ಕೆ ಸಿಲುಕಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಪ್ರತಾಪ್ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಡಿಜಿಸಿಎ ಹೆಸರಲ್ಲಿ ಪ್ರತಾಪ್ ಮೋಸ ಮಾಡಿ ಡ್ರೋಣ್ ಮಾರಾಟ ಮಾಡ್ತಾ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಡ್ರೋಣ್ ತಯಾರಿ ಮಾಡಲಿಕ್ಕಾಗಲಿ ಅಥವಾ ಡ್ರೋಣ್ ಮಾರಾಟ ಮಾಡೋದಕ್ಕೆ ಆಗಲಿ ಡಿಜಿಸಿಎ ಅನುಮತಿ ಪರವಾನಿಗೆ ಪಡೆಯಬೇಕು. ಆದರೆ, ಪ್ರತಾಪ್ ಆ ಪರವಾನಿಗೆ ಪಡೆದಿಲ್ಲ ಎಂದು ಪರಮೇಶ್ ಎಂಬುವವರು ದೂರು ನೀಡಿದ್ದರು. ಈಗ ದೂರಿನ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸರು ದೂರಿನ ಮಾಹಿತಿಯನ್ನು ಡಿಜಿಸಿಎ ಗೆ ಕಳುಹಿಸಿದ್ದಾರೆ.
ಈಗಾಗಲೇ ಡ್ರೋನ್ ಪ್ರತಾಪ್ ಮೇಲೆ ಮೂರು ದೂರುಗಳು ದಾಖಲಾಗಿದೆ. ಆದರೆ ಯಾವುದೇ ಎಫ್.ಐ.ಆರ್ ದಾಖಲಾಗಿಲ್ಲ ಎಂದು ಸುದ್ದಿಕೇಳಿ ಬಂದಿದೆ.