ಶಿವಮೊಗ್ಗ:- ಶಿವಮೊಗ್ಗ ಬಂಡಾಯ ಅಭ್ಯರ್ಥಿ ಈಶ್ವರಪ್ಪ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್ ದಾಖಲಾಗಿದೆ.
ಶಿಕಾರಿಪುರದಲ್ಲಿ ಮಾ.24ರಂದು ನಿಯಮ ಮೀರಿ ಬೈಕ್ ರ್ಯಾಲಿ ನಡೆಸಿದ್ದರು. 10 ಬೈಕ್, ಒಂದು ಜೀಪ್ಗೆ ಮಾತ್ರ ಅನುಮತಿ ಪಡೆದಿದ್ದರು. ಆದರೆ ರ್ಯಾಲಿಯಲ್ಲಿ 50ಕ್ಕೂ ಹೆಚ್ಚು ಬೈಕ್ಗಳು, 4 ಕಾರು ಭಾಗಿ ಹಿನ್ನೆಲೆ ಚುನಾವಣಾಧಿಕಾರಿ ದೂರಿನ ಮೇರೆಗೆ ಈಶ್ವರಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಬೈಕ್ಗಳ ಮೇಲೆ ಓಂ ಬಾವುಟ ಕಟ್ಟಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ.
Vijayapura: ಚಿತ್ರದುರ್ಗ ಎಸ್ ಸಿ ಲೋಕಸಭಾ ಕ್ಷೇತ್ರದಿಂದ ಗೋವಿಂದ ಕಾರಜೋಳ ಕಣಕ್ಕೆ – ಫ್ಯಾನ್ಸ್ ಸಂಭ್ರಮ!
ರಾಜ್ಯದ 20 ಕ್ಷೇತ್ರಗಳಿಗೆ ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ಪಕ್ಷದೊಳಗೆ ಟಿಕೆಟ್ ವಂಚಿತರ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ. ಅದ್ರಲ್ಲೂ ಪುತ್ರನಿಗೆ ಟಿಕೆಟ್ ಮಿಸ್ ಆದ್ಮೇಲೆ, ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಅಕ್ಷರಶಃ ಆಕ್ರೋಶ ಹೊರಹಾಕಿದ್ದರು. ತಮ್ಮ ಮುಂದಿನ ನಡೆ ಬಗ್ಗೆ ನಿರ್ಧಾರ ಕೈಗೊಳ್ಳಲು ಇತ್ತೀಚೆಗೆ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸಿದ ಈಶ್ವರಪ್ಪ ಮಹತ್ವದ ನಿರ್ಣಯ ಕೈಗೊಂಡಿದ್ದರು. ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಘೋಷಿಸಿದ್ದರು. ಪ್ರಾಣಹೋದ್ರೂ ಮೋದಿ ವಿರುದ್ಧ ಹೋಗಲ್ಲ ಎನ್ನುತ್ತಲೇ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದರು.