ಬೆಳಗಾವಿ:- ಇಫ್ತಿಯಾರ್ ಕೂಟದ ವೇಳೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿರುವ ಘಟನೆ ಬೆಳಗಾವಿ ಶಾಸ್ತ್ರೀಯ ಚೌಕದಲ್ಲಿ ಜರುಗಿದೆ. ರಂಜಾನ್ ಹಬ್ಬದ ಉಪವಾಸ ಬಿಡುವಾಗ ಪರಸ್ಪರ ಜಗಳ ನಡೆದಿದೆ.
ಬೈಕ್ ಬಿಡಲಿಲ್ಲ ಅಂತಾ ವಾಗ್ವಾದ ನಡೆದಿದೆ. ವಾಗ್ವಾದ ನೋಡು ನೋಡುತ್ತಿದ್ದಂತೆ ಕೈಯಲ್ಲಿ ಚೇರ್ ಹಿಡಿದು ಮಾರಾಮಾರಿ ನಡೆದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಗಮಿಸುತ್ತಿದ್ದಂತಂ ಸ್ಥಳದಿಂದ ಎರಡು ಗುಂಪಿನ ಯುವಕರು ಪರಾರಿ ಆಗಿದ್ದಾರೆ.
ಸದ್ಯ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.