ಮಂಡ್ಯ : ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಮತ್ತು ಸಾಲ ಪಡೆದವರ ನಡುವೆ ಮಾರಾಮಾರಿ ನಡೆದಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಬೈಕಿ ಹಚ್ಚಿದ ಘಟನೆ ನಡೆದಿದೆ. ಮಂಡ್ಯದ ನಾಗಮಂಗಲದ ಗೆಜ್ಜೆಹೊಸಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಗೆಜ್ಜೆಹೊಸಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವರು ತಮ್ಮ ಪತಿ ಲಕ್ಷ್ಮಣ್ ಅವರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ನಲ್ಲಿ ಎರಡೂವರೆ ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು 11 ಸಾವಿರ ಕಂತು ಕಟ್ಟಲಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಿನ್ನೆ ಸಂಜೆ ಮೈಕ್ರೋ ಸಿಬ್ಬಂದಿಗಳು ಸಾಲ ವಸೂಲಾತಿಗೆ ಹೋಗಿದ್ದರು.
ಮುಂದಿನ ವರ್ಷ ನೂತನ ಅನುಭವ ಮಂಟಪ ಉದ್ಘಾಟನೆ ; ಬಸವಕಲ್ಯಾಣದಲ್ಲಿ ಸಚಿವ ಸಂಪುಟಕ್ಕೆ ಮನವಿ ; ಸಚಿವ ಖಂಡ್ರೆ
ಪ್ರಶಾಂತ್ ಮತ್ತು ಪ್ರೀತಮ್ ಸಾಲ ವಸೂಲಾತಿಗೆ ಹೋಗಿದ್ದು ಈ ವೇಳೆ ಭಾಗ್ಯಮ್ಮ ಮಗ ಸುನೀಲ್ ಹಾಗೂ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಸುನೀಲ್ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಆಕ್ರೋಶಗೊಂಡ ಭಾಗ್ಯಮ ಕುಟುಂಬಸ್ಥರು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಬೈಕಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಈ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.