ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನೇನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ 2 ವಾರ ಬಾಕಿ ಉಳಿದಿದೆ. ಆದ್ರೆ. ಭಾನುವಾರದ ಸಂಚಿಕೆಯಲ್ಲಿ ಭವ್ಯಾ ಗೌಡಗೆ ಕಿಚ್ಚ ಸುದೀಪ್ ಅವರು ಕಳಪೆ ಪಟ್ಟ ಕೊಟ್ಟಿದ್ದರು. ಇದೀಗ ಮತ್ತೆ ಭವ್ಯ ಅದೇ ರೀತಿ ಕಳ್ಳಾಟ ಆಡಲು ಮೂಮದಾಗಿದ್ದಾಳೆ. ಹೌದು ಈ ವಾರ ‘ಮಿಡ್ ವೀಕ್ ಎಲಿಮಿನೇಷನ್’ ಇದೆ ಎಂದು ಬಿಗ್ ಬಾಸ್ ಘೋಷಣೆ ಮಾಡಿದ್ದಾರೆ. ಭವ್ಯಾ ಹಾಗೂ ಮೋಕ್ಷಿತಾ ಸೇರಿ ರಜತ್ಗೆ ಸ್ಕೆಚ್ ಇಟ್ಟಿದ್ದಾರೆ.
ಬಿಗ್ಬಾಸ್ ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಲು ಇಂದು ಟಾಸ್ಕ್ವೊಂದನ್ನು ಸ್ಪರ್ಧಿಗಳಿಗೆ ನೀಡುತ್ತಾರೆ. ಈ ಟಾಸ್ಕ್ನಲ್ಲಿ ಗ್ರೀಸ್ ಹಾಗೂ ಎಣ್ಣೆ ಹಚ್ಚಿದ ಒಂದು ಬೋರ್ಡ್ ಮೇಲೆ ಹಗ್ಗ ಹಿಡಿದುಕೊಂಡು ಸ್ಪರ್ಧಿಗಳು ನಡೆದು ತುದಿಯಲ್ಲಿ ಸಿಕ್ಕಿಸಿದ ಮರದ ತುಂಡುಗಳನ್ನು ತಂದು ನೆಟ್ನಲ್ಲಿ ಹಾಕಬೇಕು. ಈ ನೆಟ್ಗಳಿಗೆ ಮನೆಯ ಸ್ಪರ್ಧಿಗಳ ಫೋಟೋಗಳನ್ನು ಅಂಟಿಸಲಾಗಿರುತ್ತದೆ. ಆಟದ ಕೊನೆಯಲ್ಲಿ ಯಾವ ಫೋಟೋ ಇರುವ ನೆಟ್ನಲ್ಲಿ ಮರದ ತುಂಡುಗಳು ಹೆಚ್ಚಾಗಿರುತ್ತೋ ಆ ಸದಸ್ಯರು ಮನೆಯಿಂದ ಎಲಿಮಿನೇಟ್ ಆಗುತ್ತಾರೆ.
ಇಲ್ಲಿ ಮೋಕ್ಷಿತಾ ತನ್ನ ಪಾಡಿಗೆ ಮರದ ತುಂಡುಗಳನ್ನು ತಂದು ನೆಟ್ನಲ್ಲಿ ಹಾಕಿದ್ದರೆ ತುಂಬಾ ಒಳ್ಳೆಯ ಸ್ಪರ್ಧಿ ಎನಿಸಿಕೊಂಡಿರುತ್ತಿದ್ದರು. ಆದರೆ ಮೋಕ್ಷಿತಾ ಮತ್ತದೇ ಹಳೆಯ ಬುದ್ಧಿ ತೋರಿಸಿದ್ದಾರೆ. ಭವ್ಯಾ ಗೌಡ ಅವರೊಂದಿಗೆ ಸೇರಿಕೊಂಡು ರಜತ್ ಫೋಟೋ ಇರುವ ನೆಟ್ನಲ್ಲೇ ಇಬ್ಬರೂ ಕೂಡ ಮರದ ತುಂಡುಗಳನ್ನು ಹಾಕಿದ್ದಾರೆ. ಮೋಕ್ಷಿತಾ ಹಾಗೂ ಭವ್ಯ ನಡುವೆ ನಡೆದ ಈ ಡೀಲ್ ರಜತ್ ಅವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಅಲ್ಲದೆ ರಜತ್ ಇದನ್ನು ಮೋಕ್ಷಿತಾ ಹಾಗೂ ಭವ್ಯಾ ಅವರಿಗೆ ಪ್ರಶ್ನೆ ಕೂಡ ಮಾಡುತ್ತಾರೆ. ಇನ್ನೂ ತ್ರಿವಿಕ್ರಮ್ ಅವರಿಗೂ ಈ ಒಳಸಂಚು ಅರ್ಥವಾಗುತ್ತದೆ. ಆಗ ಮೋಕ್ಷಿತಾ ನಾವು ನಿಯತ್ತಾಗಿ ಆಡಿದಿವಿ ಅಂತ ಸಮರ್ಥನೆ ಕೂಡ ಮಾಡಿಕೊಳ್ಳುತ್ತಾರೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.