ಕಲಬುರ್ಗಿ:- ವಕ್ಫ್ ವಿರುದ್ಧದ ಹೋರಾಟ ರೈತರಿಗಾಗಿ ಹೊರತು ರಾಜಕೀಯಕ್ಕಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Murder Case: ದರ್ಶನ್ ಸಿಗಿಸಲು ಪೊಲೀಸರೇ ಸುಳ್ಳು ಕಥೆ ಹೆಣೆದಿದ್ದಾರೆ: ಹೈಕೋರ್ಟ್ ನಲ್ಲಿ ಸಿವಿ ನಾಗೇಶ್ ವಾದ!
ಈ ಸಂಬಂಧ ಮಾತನಾಡಿದ ಅವರು, ನಾವು ರಾಜ್ಯದ ರೈತರಿಗಾಗಿ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಯಾವುದೇ ಕುಟುಂಬದ ವಿರುದ್ಧವಾಗಿ ಅಲ್ಲ ಎಂದರು.
ನಾವೇನೂ ಮುಖ್ಯಮಂತ್ರಿಯಾಗಲು ಹೋರಾಟ ನಡೆಸುತ್ತಿಲ್ಲ. ರಾಜ್ಯದ ರೈತರಿಗೆ ಸಂಕಷ್ಟ ಬಂದಿದೆ. ಸಂಕಷ್ಟಕ್ಕೆ ಕಾರಣವಾಗಿರುವ ವಕ್ಫ್ ವಿರುದ್ಧ ಜನಜಾಗೃತಿಗಾಗಿ ಹೋರಾಟ ನಡೆಸಲಾಗುತ್ತಿದೆ ಹೊರತು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಆಗಿರುವ ಸೋಲಿನ ಹೊಣೆಯನ್ನು ಎಲ್ಲಾ ನಾಯಕರು ಹೊರಬೇಕು ಎಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಗೆದ್ದರೆ ಅವರು ಹೊರಬೇಕು. ಸೋತರೆ ನಾವು ಹೊರಬೇಕು. ಹಿರಿಯರು ಹೇಳಿದ ಮಾತ್ರಕ್ಕೆ ನಾವೆಲ್ಲ ಕೇಳಬೇಕು ಎಂದು ವ್ಯಂಗ್ಯವಾಡಿದರು