ಕೆಆರ್ ಪುರ:- ವಾಲ್ಮಿಕಿ ಸಮುದಾಯಕ್ಕೆ ಸಮುದಾಯ ಭವನ, ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯ ನಿರ್ಮಾಣ ಮಾಡಲು ಪೂರ್ವ ತಾಲ್ಲೂಕಿನಲ್ಲಿ ಜಾಗ ಮಂಜೂರು ಮಾಡಬೇಕು ಇಲ್ಲದ್ದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವು ಎಂದು ವಾಲ್ಮೀಕಿ ಜನಾಂಗದ ಮುಖಂಡ ಬೆಳ್ಳೂರು ಆಂಜಿನಪ್ಪ ಅವರು ಎಚ್ಚರಿಕೆ ನೀಡಿದರು.
3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ- ಸಚಿವ ಭೈರತಿ ಸುರೇಶ್!
ಕೆಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2010 ರಿಂದಲೂ ಜನಾಂಗಕ್ಕೆ ಸಮುದಾಯಭವನ ಕಟ್ಟಲು ಜಾಗ ನೀಡುವಂತೆ ಸರ್ಕಾರವನ್ನು ಮನವಿ ಮಾಡಿಕೊಂಡು ಬರುತ್ತಿದ್ದೇವೆ ಇದುವರೆಗೂ ನಮ್ಮ ಮನವಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಇದೇ ರೀತಿ ಮುಂದುವರೆದರೆ ಇನ್ನಷ್ಟು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಜನಾಂಗದಲ್ಲಿ ವಿದ್ಯಾಭ್ಯಾಸದ ಕೊರತೆ ಇದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಮೂಲಕ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರದ ಸವಲತ್ತು ಜನಾಂಗಕ್ಕೆ ತಲುಪಬೇಕು ಈ ನಿಟ್ಟಿನಲ್ಲಿ ಜನಾಂಗದ ಮುಖಂಡರು ಸರ್ಕಾರಿ ಅಧಿಕಾರಿಗಳ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಬಾಕ್ಸರ್ ನಾಗರಾಜ್ ಅವರು
ಮಾತನಾಡಿ, ಜನಾಂಗದ ಭವನ, ಶಿಕ್ಷಣ ಸೇರಿದಂತೆ ಹಲವು ಸೌಲಭ್ಯಕ್ಕಾಗಿ ಐದು ಎಕರೆ ಜಾಗವನ್ನು ಮೀಸಲಿಡಬೇಕು ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅವರ ತತ್ವ ಮತ್ತು ಆದಶೇಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮಹರ್ಷಿ ವಾಲ್ಮೀಕಿ ಅವರು ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಸ್ಮರಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕು ವಾಲ್ಮೀಕಿ ಸಂಘದ ವತಿಯಿಂದ
ಸಮುದಾಯ ಭವನ, ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯ ನಿರ್ಮಾಣ ಮಾಡಲು ಸರ್ಕಾರಿ ಜಾಗವನ್ನ ಗುರ್ತಿಸಿ ಆದಷ್ಟು ಬೇಗ ಮಂಜೂರು ಮಾಡಿಕೊಡಬೇಕು ಎಂದು ತಾಲ್ಲೂಕು ದಂಡಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಶೇಖರ್ ಹಿರಿಯ ಮುಖಂಡರಾದ ಬಾಕ್ಸರ್ ನಾಗರಾಜ್,
ಬೆಂಗಳೂರು ಪೂರ್ವ ತಾಲ್ಲೂಕಿನ ಮಾಜಿ ಉಪಾಧ್ಯಕ್ಷೆ ವನಜಾಕ್ಷಿ
ಕಟ್ಟಗೊಲ್ಲಹಳ್ಳಿ ಶಿವಕುಮಾರ್,ಕೆಪಿಸಿಸಿ ಸದಸ್ಯ
ಎಂ. ಮಂಜುನಾಥ್, ಸಮಾಜದ ಮುಖಂಡರಾದ ಬಾಕ್ಸರ್
ನಾಗರಾಜ್, ಎಂ.ವೆಂಕಟೇಶ್,
ನಾಗೇಶ್, ಕೃಷ್ಣಮೂರ್ತಿ, ಶಾಂತಕುಮಾರ್,ಅಜಯ್ ತಾಲ್ಲೂಕು ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಮತ್ತಿತರರಿದ್ದರು