ದೇವನಹಳ್ಳಿ:- ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಜರುಗಿದೆ.
ಮಸ್ತಾನ್ ಮತ್ತು ಮೊಹಮದ್ ಅನ್ನೂ ಇಬ್ಬರು ಸಹೋದರರು ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಯೂಟರ್ನ್ ಪಡೆಯೋಕ್ಕೆ ಮುಂದಾಗ್ತಿದ್ದಂತೆ ಎಂಸ್ಯಾಂಡ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿ ನೋಡ ನೋಡ್ತಿದಂತೆ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಇಬ್ಬರು ಸಹೋದರರು ಕೆಳಗಡೆ ಬಿದ್ದಿದ್ದಾರೆ. ಇನ್ನೂ ಈ ವೇಳೆ ವೇಗವಾಗಿದ್ದ ಟಿಪ್ಪರ್ ಲಾರಿ ಇಬ್ಬರು ಸಹೋದರರ ಮೇಲೆ ಹರಿದಿದೆ.
ಸ್ಥಳದಲ್ಲೇ ಮಸ್ತಾನ್ ಸಾವನ್ನಪ್ಪಿದ್ದಾರೆ, ಜೊತೆಗೆ ಮೊಹಮದ್ ಮೇಲು ಟಿಪ್ಪರ್ ಹರಿದ ಪರಿಣಾಮ ಕಾಲುಗಳು ನಜ್ಜುಗುಜ್ಜಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತನು ಮೃತಪಟ್ಟಿದ್ದಾನೆ.
ಮೃತ ಮಸ್ತಾನ್ ಮತ್ತು ಮೊಹಮದ್ ಮೂಲತಃ ಬಳ್ಳಾರಿಯವರಾಗಿದ್ದು, ಕಳೆದ ವರ್ಷ ತಂದೆ ಅಪಘಾತದಲ್ಲಿ ಸಾವನ್ನಪಿದ್ದ ಕಾರಣ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದರು. ದೇವನಹಳ್ಳಿ ಬಳಿಯೇ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದರು. ಇಂದು ಕೆಲಸಕ್ಕೆ ತೆರಳಲು ಬಂದಾಗ ಅಣ್ಣ ತಮ್ಮಂದಿರ ಜೀವನದಲ್ಲಿ ವಿಧಿ ಕ್ರೂರ ಆಟವಾಡಿದೆ.