ಫೆಂಗಲ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ಸುರಿಯುತ್ತಿರುವ ಮಹಾಮಳೆಯ ಜೊತೆಗೆ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಜನರ ಪರಿಸ್ಥಿತಿ ಹೇಳತೀರದಾಗಿದೆ. ಅದರಲ್ಲೂ ತಿರುವಣ್ಣಾಮಲೈನಲ್ಲಿ ಜನಜೀವನವೇ ದುಸ್ತರವಾಗಿದೆ. ತಿರುವಣ್ಣಾಮಲೈ ನಲ್ಲಿ ಭಾರೀ ಪ್ರವಾಹದ ಜೊತೆಗೆ ಭೂಕುಸಿತಗೊಂಡಿದ್ದು, ಏಳು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ತಿರುವಣ್ಣಾಮಲೈನ ಅಣ್ಣಾಮಲೈಯಾರ್ ನ ಬೆಟ್ಟದ ತಪ್ಪಲಿನಲ್ಲಿರುವ ವಿಬಿಸಿ ನಗರದಲ್ಲಿ ಭೂಕುಸಿತ ಸಂಭವಿಸಿದ್ದು, ಅಪಾರ ಮನೆಗಳು ಹಾನಿಗೊಳಗಾಗಿವೆ. ಸದ್ಯ ಎನ್ ಡಿಆರ್ ಎಫ್ ಸೇರಿದಂತೆ ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯ ನಡೀತಿದೆ.
ತಮಿಳುನಾಡಿನಲ್ಲಿ ಫೆಂಗಲ್ ಅಬ್ಬರ: ತಿರುವಣ್ಣಾಮಲೈನಲ್ಲಿ ಭೂಕುಸಿತ
By Author AIN