ಧಾರವಾಡ: ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದಲ್ಲಿ ಮಳೆ ಇಲ್ಲದೇ ಬೆಳೆಗಳೆಲ್ಲ ಒಣಗುತ್ತಿದ್ದು, ರೈತರು ಟ್ಯಾಂಕರ್ ಮುಖಾಂತರ ನೀರು ತಂದು ಹಾಯಿಸುತ್ತಿದ್ದಾರೆ. ಬಿತ್ತಿದ ಬೆಳೆ ಕೈ ತಪ್ಪುವ ಕಾರಣ ಕೆರೆ ಇರುವೆಡೆ ಹೋಗಿ ಟ್ಯಾಂಕರ್ ಭರ್ತಿ ಮಾಡಿಕೊಂಡು ತರುವುದು ಅನಿವಾರ್ಯವಾಗಿದೆ.
ತಾಲೂಕಿನಲ್ಲಿ ಭೀಕರ ಬರ ಬಿದ್ದಿದ್ದು, ಬಿತ್ತಿದ ಅಲ್ಪ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಪ್ರತಿನಿತ್ಯ ನೀರಿಗಾಗಿ ಸಾವಿರಾರು ರೂ. ಖರ್ಚು ಮಾಡಬೇಕಾಗಿದೆ ಎಂದು ಗ್ರಾಮದ ರೈತ ಮಲ್ಲಪ್ಪ 2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ನೀರು ಹಾಯಿಸಿ ಮೇವಿನ ನಿರೀಕ್ಷೆಯಲ್ಲಿದ್ದಾರೆ.
6 ದನಕರುಗಳನ್ನು ಹೊಂದಿರುವ ಮಲ್ಲಪ್ಪ ಬರಗಾಲದಿಂದ ತತ್ತರಿಸುವ ಅನ್ನದಾತನಿಗೆ ದನಕರುಗಳ ಮೇವಿನ ಚಿಂತೆಯಾಗಿದೆ. ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡುದ್ದೇವೆ. ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಾಗುತ್ತದೆ. ಹಾಗಾಗಿ ಒಂದು ಟ್ಯಾಂಕರ್ ನೀರಿಗೆ 4,50ರೂಪಾಯಿ ನೀಡಿ ನೀರು ಬೀಡಿಸಿ ತನ್ನ ಕಷ್ಟದಲ್ಲೂ ದನಕರುಗಳ ಹಸಿವು ನಿಗಿಸೋ ಚಿಂತೆಯಲ್ಲಿ ಅನ್ನದಾತನಿದ್ದಾನೆ